ಕಾರು - ಆಟೋ ರಿಕ್ಷಾ ಢಿಕ್ಕಿ : ಇಬ್ಬರಿಗೆ ಗಾಯ

ಕಾಸರಗೋಡು,ಜು.16 : ಕಾರು - ಆಟೋ ರಿಕ್ಷಾ ನಡುವೆ ಉಂಟಾದ ಅಪಘಾತದಲ್ಲಿ ಇಬ್ಬರು ಗಾಯಗೊಂಡ ಘಟನೆ ಆದಿತ್ಯವಾರ ಸಂಜೆ ಮೇಲ್ಪರಂಬ ಕಟ್ಟಕ್ಕಾಲ್ ನಲ್ಲಿ ನಡೆದಿದೆ.
ಗಾಯಗೊಂಡ ಆಟೋ ಚಾಲಕ , ಆರಮಂಗಾನದ ರಾಜೇಶ್ ಮತ್ತು ಪ್ರಯಾಣಿಕ ಅಶ್ರಫ್ ಗಂಭೀರ ಗಾಯಗೊಂಡಿದ್ದು , ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಣಿಪಾಲಕ್ಕೆ ತೆರಳುತ್ತಿದ್ದ ಕಾರು ಮತ್ತು ಆಟೋ ನಡುವೆ ಅಪಘಾತ ನಡೆದಿದೆ. ಕಾರಿನಲ್ಲಿದ್ದ ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಬೇಕಲ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story





