ಕಾಟಿಪಳ್ಳ ಸರಕಾರಿ ಶಾಲೆಯಲ್ಲಿ ಪೋಷಕರ ಸಭೆ
ಮಂಗಳೂರು, ಜು.16: ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ 2ನೇ ವಿಭಾಗದ ಕಾಟಿಪಳ್ಳದಲ್ಲಿ ಇತ್ತೀಚೆಗೆ 2017-18 ರ ಪೋಷಕರ ಸಭೆ ನಡೆಯಿತು.
ಸಿ.ಆರ್.ಪಿ ಐರಿನ್ ಪಿಂಟೋರವರು ಪೋಷಕರು ಹಾಗೂ ಮಕ್ಕಳ ವಿಷಯದ ಬಗ್ಗೆ ಮಾತನಾಡಿದರು. ಹಾಗೂ ಕಬೀರ್ ಕಾಟಿಪಳ್ಳರವರು ಅಲ್ಪ ಸಂಖ್ಯಾತ ಶಾಲಾ ಮಕ್ಕಳಿಗೆ ಸರಕಾರದಿಂದ ಸಿಗುವ ವಿದ್ಯಾರ್ಥಿ ವೇತನದ ಬಗ್ಗೆ ಸಂಕ್ಷಿಪ್ತವಾಗಿ ಮಾಹಿತಿಯನ್ನು ನೀಡಿದರು. ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯಿನಿ ಸತ್ಯಭಾಮಾ, ಎಸ್ ಡಿ ಎಮ್ ಸಿ ಅಧ್ಯಕ್ಷೆ ಫಾತಿಮಾ, ಉಪಾಧ್ಯಕ್ಷ ಸಾಜಿದಾ ಬಾನು ಮತ್ತಿತರರು ಉಪಸ್ಥಿತರಿದ್ದರು.
Next Story





