ಸಾಲಬಾಧೆ: ರೈತ ಆತ್ಮಹತ್ಯೆ

ಪಾಂಡವಪುರ, ಜು.16: ತಾಲೂಕಿನ ಹೊನ್ನೇನಹಳ್ಳಿ ಗ್ರಾಮದ ರೈತ ಮಹದೇವಪ್ಪ(65) ಸಾಲಬಾಧೆ ತಾಳದೆ ಶನಿವಾರ ತಡರಾತ್ರಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮಹದೇವಪ್ಪನಿಗೆ ಸುಮಾರು 1.5 ಎಕರೆ ಜಮೀನಿದ್ದು, ಪಿಎಲ್‌ಡಿ ಬ್ಯಾಂಕ್‌ನಲ್ಲಿ 58 ಸಾವಿರ ರೂ. ಕುರಿಸಾಲ ಪಡೆದಿದ್ದು, ಬಡ್ಡಿ ಸೇರಿ ಸುಮಾರು 1.9 ಲಕ್ಷ ರೂ. ಆಗಿತ್ತು ಎನ್ನಲಾಗಿದೆ. ಬ್ಯಾಂಕ್‌ನವರಿಂದ ಸಾಲ ಮರುಪಾವತಿಗೆ ಒತ್ತಡ ಬಂದ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಂಬದವರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
Next Story





