ರಾಷ್ಟ್ರಪತಿ ಚುನಾವಣೆ: ಮತದಾನಕ್ಕೆ ಸ್ವಂತ ಪೆನ್ ಬಳಕೆ ನಿಷೇಧ

ಹೊಸದಿಲ್ಲಿ, ಜು.16: ಸೋಮವಾರ ನಡೆಯಲಿರುವ ರಾಷ್ಟ್ರಪತಿ ಚುನಾವಣೆಯಲ್ಲಿ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಸಂಸದರು ಹಾಗೂ ಶಾಸಕರು ತಮ್ಮ ಪೆನ್‌ಗಳನ್ನು ಬಳಸುವಂತಿಲ್ಲ. ಆಯೋಗವು ಚುನಾವಣೆಗಾಗಿಯೇ ವಿಶೇಷವಾಗಿ ವಿನ್ಯಾಸಗೊಳಿಸಿದ ವಿಶಿಷ್ಟ ಪೆನ್ ಮೂಲಕ ಅವರು ಅಭ್ಯರ್ಥಿಯ ಹೆಸರಿಗೆ ಗುರುತು ಮಾಡಬೇಕಾಗುತ್ತದೆ.
ಇದರ ಹೊರತಾಗಿ ಇನ್ನಾವುದೇ ಪೆನ್ ಬಳಸಿ, ಮಾಡುವ ಮತದಾನವು ಅಸಿಂಧುವಾಗಲಿದೆಯೆಂದು ಚುನಾವಣಾ ಆಯೋಗವು ರವಿವಾರ ತಿಳಿಸಿದೆ.
ನೇರಳ ಬಣ್ಣದ ಶಾಯಿಯನ್ನು ಹೊಂದಿರುವ ಈ ವಿಶಿಷ್ಟ ಪೆನ್ ಅನ್ನು ಮೈಸೂರು ಪೇಂಟ್ಸ್ ಸಂಸ್ಥೆಯು ಪೂರೈಕೆ ಮಾಡಿದೆ. ವಿಶಿಷ್ಟವಾದ ಸರಣಿ ಸಂಖ್ಯೆಯನ್ನು ಹೊಂದಿರುವ ಸಂಸತ್ ಭವನ ಹಾಗೂ ರಾಜ್ಯ ವಿಧಾನಸಭೆಗಳಲ್ಲಿರುವ ಮತಗಟ್ಟೆಯನ್ನು ಪ್ರವೇಶಿಸುವಾಗ ಮತದಾರರಿಗೆ ಈ ಪೆನ್ ನೀಡಲಾಗುತ್ತದೆ.
Next Story





