ಪಕ್ಷಿಗಳ ಸಂರಕ್ಷಣೆಗೆ 'ಪಕ್ಷಿ ಭೂಪಟ' ರಚನೆ
ದೇಶದಲ್ಲೇ ಮೊದಲ ಪ್ರಯತ್ನಕ್ಕೆ ಕಾಸರಗೋಡಿನಲ್ಲಿ ಚಾಲನೆ

ಕಾಸರಗೋಡು, ಜು.16: ಕೇರಳದಲ್ಲಿ ಅರಣ್ಯ ಇಲಾಖೆಯು ಪಕ್ಷಿ ಪ್ರೇಮಿಗಳ ಸಹಕಾರದಲ್ಲಿ ‘ಪಕ್ಷಿ ಭೂಪಟ’ ರಚಿಸಲು ಮುಂದಾ ಗಿದೆ. ಪಾಶ್ಚಾತ್ಯ ದೇಶಗಳಲ್ಲಿರುವ ಈ ಪಕ್ಷಿ ಭೂಪಟ ರಚನೆ ಪ್ರಯೋಗವು ದೇಶದಲ್ಲೇ ಇದು ಮೊದಲನೆಯದ್ದಾಗಿದೆ.
ಪಕ್ಷಿ ಭೂಪಟ ರಚನೆಗಾಗಿ ಮಳೆಗಾಲ ಮತ್ತು ಬೇಸಿಗೆ ಕಾಲದಲ್ಲಿ ಎರಡು ಹಂತಗಳಲ್ಲಿ ಪಕ್ಷಿಗಳ ಸರ್ವೇ ನಡೆಯಲಿದೆ. ಮೊದಲ ಹಂತದ ಸರ್ವೇ ಜುಲೈ 15ರಿಂದ ಆರಂಭಗೊಂಡಿದ್ದು, ಸೆಪ್ಟಂಬರ್ 13ರ ತನಕ ನಡೆಯಲಿದೆ. ಎರಡನೆ ಹಂತವು ಜನವರಿ 13ರಿಂದ ಮಾರ್ಚ್ 13ರ ತನಕ ನಡುವೆ ನಡೆಯಲಿದೆ. ಈ ಸರ್ವೇ ಮೂಲಕ ಹಕ್ಕಿಗಳ ಪ್ರಮಾಣ, ಹಕ್ಕಿಗಳ ಪ್ರಭೇದ, ವಲಸೆ ಹಕ್ಕಿಗಳು, ಅವುಗಳ ವಾಸಸ್ಥಳ ಮೊದಲಾದವುಗಳ ಬಗ್ಗೆ ಸಮಗ್ರ ಮಾಹಿತಿಯನ್ನು ಕಲೆ ಹಾಕಲಾಗುತ್ತದೆ.
ಬೆಳಗ್ಗೆ 6ರಿಂದ 10ವರೆಗೆ, ಸಂಜೆ 4ರಿಂದ 6ರವರೆಗೆ ಅವಧಿ ಯಲ್ಲಿ ಪಕ್ಷಿಗಳ ಸರ್ವೇ ಹಾಗೂ ವೀಕ್ಷಣೆ ನಡೆಯಲಿದೆ. ಇದಕ್ಕಾಗಿ ಪಕ್ಷಿ ತಜ್ಞರು, 187 ವಿದ್ಯಾರ್ಥಿಗಳು, ಅಧ್ಯಾಪಕರು, ಯುವಕರು, ಅಧಿಕಾರಿಗಳನ್ನು ಒಳಗೊಂಡ ತಂಡವು ಸಾರ್ವ ಜನಿಕರ ಸಹಭಾಗಿತ್ವದಲ್ಲಿ ಜಿಲ್ಲೆಯ ವಿವಿಧ ಕಡೆಗಳಲ್ಲಿ ಕಾರ್ಯಾಚರಿಸಲಿದೆ.
ಸರ್ವೇಯಲ್ಲಿ ಪಕ್ಷಿಗಳ ಚಿತ್ರೀಕರಣ ನಡೆಸಲಾಗುತ್ತಿದೆ. ಪಕ್ಷಿಗಳ ಹಾರಾಟ, ಧ್ವನಿ ಮೊದಲಾದ ಮಾಹಿತಿಯನ್ನು ಸಂಗ್ರಹಿ ಸಲಾಗುತ್ತದೆ. ಜಿಲ್ಲೆಯ ಕೆಲವು ಆಯ್ದ ಸ್ಥಳಗಳನ್ನು ಕೇಂದ್ರೀಕರಿಸಿ ಈ ಸರ್ವೇ ಆರಂಭಿಸಲಾಗಿದೆ.
ಪ್ರಸಕ್ತ ವರ್ಷಾರಂಭದಲ್ಲಿ ಪಕ್ಷಿ ಪ್ರೇಮಿಗಳು ಸರ್ವೇ ನಡೆಸಿ ಕೆಲವು ಪಕ್ಷಿಗಳ ಚಿತ್ರೀಕರಣ ನಡೆಸಿದ್ದರು. ಈ ವೇಳೆ ಕೆಲವು ಅಪೂರ್ವ ಪಕ್ಷಿಗಳು ಗೋಚರವಾಗಿದ್ದವೆನ್ನಲಾಗಿದೆ. ಮೂರು ವರ್ಷಗಳ ಅವಧಿಯಲ್ಲಿ ‘ಪಕ್ಷಿ ಭೂಪಟ’ ತಯಾರಿಸುವ ಗುರಿ ಹೊಂದಲಾಗಿದೆ. ಈ ಭೂಪಟ ರಚನೆಯೂ ಪಕ್ಷಿ ಪ್ರೇಮಿಗಳಿಗೆ, ವಿದ್ಯಾರ್ಥಿಗಳಿಗೆ ಸಾರ್ವಜನಿಕರಿಗೂ ಪ್ರಯೋಜ ನಕಾರಿ ಎಂದು ಹೇಳಲಾಗಿದೆ.
ಅರಣ್ಯ ನಾಶ, ಕಾಂಕ್ರಿಟ್ ಕಾಡುಗಳು ಬೆಳೆಯುತ್ತಿರುವುದು, ಮೊಬೈಲ್ ಟವರ್‌ಗಳು ಹಾಗೂ ಮಾನವನ ಸ್ವಾರ್ಥದಿಂದ ಪಕ್ಷಿ ಸಂಕುಲ ವಿನಾಶದ ಅಂಚಿನಲ್ಲಿದೆ. ಗುಬ್ಬಚ್ಚಿಯಂತಹ ಹಕ್ಕಿಗಳು ಈಗಾಗಲೇ ಅಪರೂಪವಾಗಿವೆ. ಈ ನಿಟ್ಟಿನಲ್ಲಿ ಪಕ್ಷಿ ಪ್ರೇಮಿಗಳ ಈ ಭೂಪಟ ರಚನೆ ಯೋಜನೆಯು ಪಕ್ಷಿಗಳ ಸಮಗ್ರ ಅಧ್ಯಯನ, ಸಂರಕ್ಷಣೆಗೆ ಮುಂದಿನ ಪೀಳಿಗೆಗೆ ಅವಕಾಶ ಮಾಡಿಕೊಡಲಿದೆ. ‘ಪಕ್ಷಿ ಭೂಪಟ’ ಹಕ್ಕಿಗಳ ಕಲರವವನ್ನು ಪಕ್ಷಿ ಪ್ರೇಮಿಗಳ ಮುಂದಿಡಲಿದೆ.
ಪಕ್ಷಿ ಭೂಪಟ ರಚನೆಗೆ ವಿದ್ಯಾನಗರ ವನಶ್ರೀ ಕಾಂಪ್ಲೆಕ್ಸ್ ನಲ್ಲಿ ನಡೆದ ಸಮಾರಂಭದಲ್ಲಿ ಜಿಲ್ಲಾಧಿಕಾರಿ ಕೆ.ಜೀವನ್ ಬಾಬು ಚಾಲನೆ ನೀಡಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಜಿ.ಸಿಮೋನ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪಿ.ಬಿಜು ಮೊದಲಾ ದವರು ಉಪಸ್ಥಿತರಿದ್ದರು.







