Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಪ್ರತಿರೋಧವಿಲ್ಲದ ಪ್ರಜಾತಂತ್ರ ಇವರ...

ಪ್ರತಿರೋಧವಿಲ್ಲದ ಪ್ರಜಾತಂತ್ರ ಇವರ ಹೆಬ್ಬಯಕೆ

ಸನತ್ ಕುಮಾರ್ ಬೆಳಗಲಿಸನತ್ ಕುಮಾರ್ ಬೆಳಗಲಿ17 July 2017 12:12 AM IST
share
ಪ್ರತಿರೋಧವಿಲ್ಲದ ಪ್ರಜಾತಂತ್ರ ಇವರ ಹೆಬ್ಬಯಕೆ

ನರೇಂದ್ರ ಮೋದಿ ಅವರಿಗೆ ದೊರೆತಿರುವ ಪ್ರಶ್ನಾತೀತ ಅಧಿಕಾರವನ್ನು ಬಳಸಿಕೊಂಡು ತಮ್ಮ ಕಲ್ಪನೆಯ ಹಿಂದೂ ರಾಷ್ಟ್ರವನ್ನು ನಿರ್ಮಿಸಲು ಆರೆಸ್ಸೆಸ್ ಸಕಲ ಸಿದ್ಧತೆ ನಡೆಸಿದೆ. ಈ ಕಾರ್ಯವ್ಯೆಹದ ಭಾಗವಾಗಿ ಮುಸ್ಲಿಮರು, ಕ್ರೈಸ್ತರು ಮತ್ತು ಕಮ್ಯುನಿಸ್ಟರ ಮೇಲೆ ದಾಳಿ ಆರಂಭವಾಗಿದೆ. ಕಮ್ಯುನಿಸ್ಟರು, ಮುಸ್ಲಿಮರು ಮತ್ತು ಕ್ರೈಸ್ತರು ತಮ್ಮ ಶತ್ರುಗಳೆಂದು ಗೋಳ್ವಾಲ್ಕರ್ ಹೇಳಿದ್ದರು. ಕಮ್ಯುನಿಸ್ಟರು ಎಂದರೆ ಅದರಲ್ಲಿ ಸೋಶಿಯಲಿಸ್ಟರು ಸೇರಿದಂತೆ ಎಲ್ಲಾ ಎಡಪಂಥೀಯರು ಬರುತ್ತಾರೆಂದು ಅವರ ಅಭಿಪ್ರಾಯವಾಗಿತ್ತು. ಸದ್ಯಕ್ಕೆ ಪ್ರಜಾಪ್ರಭುತ್ವಕ್ಕೆ ಗಂಡಾಂತರವಿಲ್ಲ. ಆದರೆ ಹೆಸರಿಗೆ ಮಾತ್ರ ಅದನ್ನು ಉಳಿಸಿಕೊಂಡು ಪ್ರತಿಪಕ್ಷ ಮುಕ್ತ ಭಾರತ ನಿರ್ಮಿಸುವುದು ಅವರ ಉದ್ದೇಶವಾಗಿದೆ.


ಭಾರತದಲ್ಲಿ ಪ್ರಜಾಪ್ರಭುತ್ವ ಸುರಕ್ಷಿತವಾಗಿ ಉಳಿಯುವುದೇ? ಇನ್ನೂ 10 ವರ್ಷಗಳ ಕಾಲಾವಧಿಯಲ್ಲಿ ಈ ದೇಶ ಹಿಂದಿನಂತೆ ಪ್ರಜಾಪ್ರಭುತ್ವವಾದಿ ದೇಶವಾಗಿ ಉಳಿಯುವುದೇ ಎಂಬ ಪ್ರಶ್ನೆಗಳು ಉದ್ಭವಿಸುವಂತಹ ವಿದ್ಯಮಾನಗಳು ಸಂಭವಿಸುತ್ತಿವೆ. ನಮ್ಮ ಕಣ್ಣೆದುರೇ ಆತಂಕದ ಘಟನೆಗಳು ಘಟಿಸುತ್ತಿವೆ. ಸ್ವಾತಂತ್ರ್ಯದ ಏಳು ದಶಕಗಳಲ್ಲಿ ಮೊದಲ ಬಾರಿ ಪ್ರಭುತ್ವಕ್ಕೆ ಪ್ರತಿರೋಧವೇ ಇಲ್ಲದ ದಿನಗಳಲ್ಲಿ ಬದುಕುತ್ತಿದ್ದೇವೆ. ಪ್ರತಿರೋಧ ಇಲ್ಲವೇ ಇಲ್ಲ ಎಂದೇನಿಲ್ಲ. ಆದರೆ ಈ ಪ್ರತಿರೋಧ ಸಾಂಕೇತಿಕವಾಗುತ್ತಿದೆ ಎಂಬ ಭಾವನೆ ಸಹಜವಾಗಿ ಮೂಡುತ್ತದೆ. ಈಗ ಇರುವಷ್ಟು ಪ್ರತಿರೋಧ ಕೂಡ ಇರಬಾರದು, ಭಿನ್ನಮತ ಇರಲೇಬಾರದು. ಅಂತಹ ಭಾರತವನ್ನು ನಿರ್ಮಿಸುವುದು ಈಗ ಅಧಿಕಾರ ಸೂತ್ರ ಹಿಡಿದವರ ಉದ್ದೇಶವಾಗಿದೆ.

ಪ್ರಜಾಪ್ರಭುತ್ವಕ್ಕೆ ತಕ್ಷಣ ಯಾವ ಅಪಾಯವಿಲ್ಲ. ಆದರೆ, ಪ್ರತಿರೋಧವಿಲ್ಲದ ಪ್ರಜಾಪ್ರಭುತ್ವವನ್ನು ಆಳುವ ವರ್ಗ ಬಯಸುತ್ತಿದೆ. ಸಮಾಜದ ಶೋಷಿತ ವರ್ಗಗಳ ಬಾಯಿ ಮುಚ್ಚಿಸಿ, ಆ ಮೂಲಕ ಪ್ರತಿರೋಧವಿಲ್ಲದ ಪ್ರಜಾಪ್ರಭುತ್ವವನ್ನು ಉಳಿಸಿಕೊಂಡು ಮನುವಾದಿ ಹಿಂದೂ ರಾಷ್ಟ್ರವನ್ನಾಗಿ ಮಾಡುವುದು ಈಗಿನ ಆಳುವ ಪಕ್ಷದ ಉದ್ದೇಶವಾಗಿದೆ. ಇದಕ್ಕೆ ಕಾರ್ಪೊರೇಟ್ ಬಂಡವಾಳಶಾಹಿಯ ಬೆಂಬಲವೂ ಇದೆ. ಇದರ ಮೊದಲ ಹೆಜ್ಜೆಯಾಗಿ ಕಾಂಗ್ರೆಸ್ ಮುಕ್ತ ಭಾರತದ ಮಾತು ಕೇಳಿ ಬರುತ್ತಿದೆೆ. ಮೇಲ್ನೋಟಕ್ಕೆ ಕಾಂಗ್ರೆಸ್ ಮುಕ್ತ ಭಾರತವೆಂದು ಹೇಳಿದರೂ ಕೂಡ ಪ್ರತಿಪಕ್ಷ ಮುಕ್ತ ಭಾರತವನ್ನು ಇಂದಿನ ಆಳುವ ಪಕ್ಷ ಬಯಸುತ್ತಿದೆ.

ಇಂದು ಕೇಂದ್ರದಲ್ಲಿ ಸೂತ್ರವನ್ನು ಹಿಡಿದಿರುವ ಕೇಂದ್ರ ಸರಕಾರಕ್ಕೆ ಭಿನ್ನಮತದ ಧ್ವನಿ ಕೇಳಿದರೆ, ಆಗುವುದಿಲ್ಲ. ನರೇಂದ್ರ ಮೋದಿ ನಾಯಕತ್ವ ಕೂಡ ಪ್ರತಿರೋಧವನ್ನು ಸಹಿಸುವುದಿಲ್ಲ. ಯಾವ ದಿಕ್ಕಿನಿಂದಲೂ ವಿರೋಧ ವ್ಯಕ್ತವಾಗಬಾರದು ಎಂಬುದು ಇಂದಿನ ಅಧಿಕಾರ ಸೂತ್ರ ಹಿಡಿದವರ ಉದ್ದೇಶವಾಗಿದೆ. ಇವರು ಕಾಂಗ್ರೆಸ್ ಪಕ್ಷವನ್ನು ಮಾತ್ರ ಟಾರ್ಗೆಟ್ ಮಾಡಿಲ್ಲ. ತಮ್ಮನ್ನು ಒಪ್ಪಿಕೊಳ್ಳದ ಎಲ್ಲರ ಬಾಯಿ ಮುಚ್ಚಿಸಲು ಹೊರಟಿದ್ದಾರೆ. ಅದಕ್ಕಾಗಿ ಸಿಬಿಐನಂತಹ ತನಿಖಾ ಸಂಸ್ಥೆಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಇಂತಹ ಅಸ್ತ್ರವನ್ನೇ ಬಳಸಿ, ಉತ್ತರಪ್ರದೇಶದಲ್ಲಿ ಮುಲಾಯಂ ಸಿಂಗ್ ಯಾದವರ ಸಮಾಜವಾದಿ ಪಾರ್ಟಿಯನ್ನು ಮೂಲೆಗುಂಪು ಮಾಡಲಾಗಿದೆ.

ಮಾಯಾವತಿಯವರ ಧ್ವನಿಯೂ ಕೇಳಿ ಬರುತ್ತಿಲ್ಲ. ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಮತ್ತು ಎಡಪಕ್ಷಗಳನ್ನು ಏಕಕಾಲಕ್ಕೆ ಹಣಿಯ ಲಾಗುತ್ತಿದೆ. ಬಿಹಾರದಲ್ಲಿ ತಮ್ಮಿಂದಿಗೆ ರಾಜಿ ಮಾಡಿಕೊಳ್ಳದ ಲಾಲೂ ಪ್ರಸಾದ್ ಯಾದವ್‌ಅವರ ಬಾಯಿ ಮುಚ್ಚಿಸಲು ಸಿಬಿಐ ಅಸ್ತ್ರ ಪ್ರಯೋಗಿಸಲಾಗಿದೆ. ಆದರೆ ಲಾಲೂ ಪ್ರಸಾದ್ ಯಾದವ್, ಮುಲಾಯಂರಷ್ಟು ಪುಕ್ಕಲು ಅಲ್ಲ. ಬಂದದ್ದೆಲ್ಲ ಬರಲಿ ಎಂದು ಮೋದಿ ಸರಕಾರದ ವಿರುದ್ಧ ರಣಕಹಳೆ ಮೊಳಗಿಸಿದ್ದಾರೆ. 90ರ ದಶಕದಲ್ಲಿ ಇದೇ ರೀತಿ ಸವಾಲು ಎದುರಾದಾಗ, ಅಯೋಧ್ಯೆಗೆ ಹೊರಟ ಅಡ್ವಾಣಿಯವರ ರಥಯಾತ್ರೆಯನ್ನು ಬಿಹಾರದಲ್ಲಿ ತಡೆದು ನಿಲ್ಲಿಸಿದ್ದರು. ರಾಮಜನ್ಮಭೂಮಿಗೆ ಹೊರಟಿದ್ದ ಅಡ್ವಾಣಿಯವರನ್ನು ಕೃಷ್ಣ ಜನ್ಮಭೂಮಿಗೆ ಕಳುಹಿಸಿದ್ದರು. ಜೆಪಿ ಚಳವಳಿಯಿಂದ ಬೆಳೆದು ಬಂದು ನಂತರ, ಕಮ್ಯುನಿಸ್ಟ್ ನಾಯಕ ಜ್ಯೋತಿ ಬಸು ಅವರ ಪ್ರಭಾವಕ್ಕೆ ಒಳಗಾಗಿದ್ದ ಲಾಲೂ ಪ್ರಸಾದ್ ಯಾದವ್ ಸಂಘ ಪರಿವಾರ ದೊಂದಿಗೆ ಎಂದಿಗೂ ರಾಜಿ ಮಾಡಿಕೊಳ್ಳಲಿಲ್ಲ.

ಸಂಘ ಪರಿವಾರದ ಕೈಗೆ ದೇಶ ಸಿಲುಕಿದರೆ, ನಾಶವಾಗಿ ಹೋಗುವುದೆಂದು ಜ್ಯೋತಿ ಬಸು ಅವರು ಹೇಳಿದ ಮಾತನ್ನು ಲಾಲೂ ಪ್ರಸಾದ್ ಯಾದವ್ ಪದೇ ಪದೇ ಉಚ್ಚರಿಸುತ್ತಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿತು. ಆದರೆ ಬಿಹಾರದಲ್ಲಿ ಮೋದಿಯವರ ಜೈತ್ರಯಾತ್ರೆಗೆ ನಿತೀಶ್ ಕುಮಾರ್ ಅವರ ಜೊತೆ ಸೇರಿ ಲಾಲೂ ತಡೆಯೊಡ್ಡಿದರು. ಬಿಹಾರ ಸೋಲಿಗೆ ಸೇಡು ತೀರಿಸಿಕೊಳ್ಳಲು ಹೊರಟ ಮೋದಿ-ಅಮಿತ್ ಶಾ ಜೋಡಿ ಸಿಬಿಐ ಅಸ್ತ್ರ ಪ್ರಯೋಗಿಸಿ, ಬಿಹಾರದ ಸಂಯುಕ್ತ ಸರಕಾರದಲ್ಲಿ ಬಿರುಕು ಮೂಡಿಸಲು ಮಸಲತ್ತು ನಡೆಸಿವೆ. ಲಾಲೂ ಪ್ರಸಾದ್ ಯಾದವ್ ಕೇಂದ್ರ ರೈಲ್ವೆ ಮಂತ್ರಿಯಾಗಿದ್ದಾಗ, ಅವರ ಕಿರಿಯ ಪುತ್ರ ತೇಜಸ್ವಿ ಯಾದವ್ ರೈಲ್ವೆ ಇಲಾಖೆಯಲ್ಲಿ ಅವ್ಯವಹಾರ ನಡೆಸಿದರೆಂದು ಆರೋಪಿಸಿ ಹತ್ತು ವರ್ಷದ ಹಿಂದಿನ ಕಡತ ಹೊರತೆಗೆದು ಲಾಲೂ ಬಾಯಿ ಮುಚ್ಚಿಸುವ ಯತ್ನ ನಡೆದಿದೆ.

ಸಿಬಿಐ ಅಸ್ತ್ರ ಪ್ರಯೋಗಿಸಿ ಮುಲಾಯಂ ಮತ್ತು ಮಾಯಾವತಿಯವರ ಬಾಯಿ ಮುಚ್ಚಿಸಿದಂತೆ ಲಾಲೂ ಪ್ರಸಾದ್‌ರ ಬಾಯಿ ಮುಚ್ಚಿಸಲು ಹೊರಟಿರುವ ಪ್ರಧಾನಿ ಮೋದಿ ಕಳೆದ ಫೆಬ್ರವರಿಯಲ್ಲಿ ಕಾಂಗ್ರೆಸ್ ನಾಯಕರಿಗೆ ಇದೇ ರೀತಿ ಪ್ರಯೋಗ ಮಾಡಿದ್ದರು. ನಿಮ್ಮ ಜಾತಕ ನನ್ನ ಬಳಿ ಇದೆ. ಜಾಸ್ತಿ ಮಾತನಾಡಬೇಡಿ ಎಂದಿದ್ದರು. ಆ ನಂತರ ರಾಹಲ್ ಗಾಂಧಿ ತಣ್ಣಗಾದರು. ಮೋದಿಯವರ ಈ ಭಾಷೆ ಹಿಟ್ಲರ್ ಮತ್ತು ಮುಸಲೋನಿಯವರ ಭಾಷೆಯಂತಿದೆ.

ಉತ್ತರ ಭಾರತದಲ್ಲಿ ಈ ತಂತ್ರ ಅನುಸರಿಸುತ್ತಿದ್ದರೆ, ದಕ್ಷಿಣ ಭಾರತದಲ್ಲಿ ಕೇರಳ ಮತ್ತು ಕರ್ನಾಕದಲ್ಲಿ ಕಾನೂನು ಮತ್ತು ಸುವಸ್ಥೆ ಸಮಸ್ಯೆ ಮಾಡಲು ನರೇಂದ್ರ ಮೋದಿ ಮತ್ತು ಅಮಿತ್ ಶಾ ಜೋಡಿ ಪ್ರಯತ್ನಿಸುತ್ತಿದೆ. ಕೇರಳದಲ್ಲಿ ಸಂಘ ಪರಿವಾರ ಕ್ರಿಮಿನಲ್ ಗ್ಯಾಂಗ್‌ಗಳನ್ನು ಬಳಸಿ ಸಿಪಿಎಂ ನಾಯಕರು ಮತ್ತು ಕಾರ್ಯಕರ್ತರನ್ನು ಮುಗಿಸಲು ಯತ್ನಿಸುತ್ತಿದೆ. ತಮ್ಮ ಕಾರ್ಯಾಲಯಗಳಿಗೆ ತಾವೇ ಬೆಂಕಿ ಹಚ್ಚಿ, ಸಿಪಿಎಂ ಕಾರ್ಯಕರ್ತರು ಬೆಂಕಿ ಹಚ್ಚಿದ್ದಾರೆ ಎಂದು ಹೇಳಿ ಕಥೆ ಕಟ್ಟಲಾಗುತ್ತಿದೆ. ಇತ್ತೀಚೆಗೆ ಕೇರಳಕ್ಕೆ ಭೇಟಿ ನೀಡಿದ ಹೋದ ಅಮಿತ್ ಶಾ ರಾಜ್ಯದಲ್ಲಿ ಹೇಗಾದರೂ ಮಾಡಿ, ಕೋಮು ಗಲಭೆ ಸೃಷ್ಟಿಸಿ ಅರಾಜಕತೆ ಉಂಟು ಮಾಡುವಂತೆ ಕಾರ್ಯಕರ್ತರಿಗೆ ಪ್ರಚೋದಿಸಿದರು.

ಕೇರಳದ ಕಮ್ಯುನಿಸ್ಟ್ ಸರಕಾರವನ್ನು ತೊಂದರೆಗೆ ಸಿಲುಕಿಸುವ ಸುಪಾರಿಯನ್ನು ಬಳ್ಳಾರಿಯ ಗಣಿ ಲೂಟಿಕೋರ ಜನಾರ್ದನ ರೆಡ್ಡಿ ಮತ್ತು ಉದ್ಯಮಿ ರಾಜೀವ್ ಚಂದ್ರಶೇಖರ್ ಅವರಿಗೆ ನೀಡಿದ್ದಾರೆ. ಕಮ್ಯುನಿಸ್ಟರ ಜೊತೆ ನಡೆದ ಘರ್ಷಣೆಯಲ್ಲಿ ಕೊಲ್ಲಲ್ಪಟ್ಟ ಆರೆಸ್ಸೆಸ್ ಕಾರ್ಯಕರ್ತರ ಕುಟುಂಬಗಳಿಗೆ ಹಣಕಾಸಿನ ನೆರವು ನೀಡುವ ಹೊಣೆಯನ್ನು ಜನಾರ್ದನ ರೆಡ್ಡಿ ಹೊತ್ತಿದ್ದಾರೆ. ಇದಕ್ಕೆ ಪ್ರತಿಯಾಗಿ ಸಿಬಿಐ ನ್ಯಾಯಾಲಯದಲ್ಲಿ ಇರುವ ಗಣಿ ಹಗರಣದ ಪ್ರಕರಣಗಳಿಗೆ ಎಳ್ಳು ನೀರು ಬಿಟ್ಟು ಜನಾರ್ದನ ರೆಡ್ಡಿಯನ್ನು ದೋಷಮುಕ್ತ ಮಾಡಲಾಗಿದೆ.

ಇನ್ನು ಕೇರಳದಂತೆ ಕರ್ನಾಟಕದಲ್ಲೂ ಕೂಡ ಸಿದ್ದರಾಮಯ್ಯ ಸರಕಾರ ಮುಗಿಸಲು ಸಂಚು ರೂಪುಗೊಂಡಿದೆ. ಸಿದ್ದರಾಮಯ್ಯ ಮೇಲಾಗಲಿ ಅಥವಾ ಅವರ ಸಂಪುಟದ ಸಚಿವರ ಮೇಲಾಗಲಿ, ಯಾವುದೇ ಗಂಭೀರ ಸ್ವರೂಪದ ಆರೋಪಗಳಿಲ್ಲ. ಹೀಗಾಗಿ ಬಿಜೆಪಿ ನಾಯಕರಿಗೆ ಮಾತನಾಡಲು ಅವಕಾಶ ಇಲ್ಲ. ಅದಕ್ಕೆಂದೇ ಅವರು ಕರಾವಳಿಯಲ್ಲಿ ಅರಾಜಕತೆ ಸೃಷ್ಟಿಸಿ, ರಾಜ್ಯದಲ್ಲಿ ಬೆಂಕಿ ಹಚ್ಚಲು ಪ್ರಯತ್ನ ನಡೆಸಿದ್ದಾರೆ. ಇನ್ನೊಂದು ವರ್ಷದಲ್ಲಿ ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಈ ಚುನಾವಣೆಯಲ್ಲಿ ಹೇಗಾದರೂ ಮಾಡಿ, ರಾಜ್ಯದ ಅಧಿಕಾರ ಸೂತ್ರ ಹಿಡಿಯಲು ಅಮಿತ್ ಶಾ ಷಡ್ಯಂತ್ರ ರೂಪಿಸಿದ್ದಾರೆ.

ನಾನಾ ಹಗರಣಗಳಲ್ಲಿ ಸಿಲುಕಿ ಹೆಸರು ಕೆಡಿಸಿಕೊಂಡ ಬಿಜೆಪಿ ನಾಯಕರನ್ನು ಮುಂದಿಟ್ಟುಕೊಂಡು ಹೋದರೆ, ವೋಟು ಬೀಳುವುದಿಲ್ಲ ಎಂಬ ಭಾವನೆಯನ್ನು ಕೇಂದ್ರೀಯ ನಾಯಕರು ಹೊಂದಿದ್ದಾರೆ. ಅದಕ್ಕೆಂದೇ ಕೋಮು ಗಲಭೆ, ಅರಾಜಕತೆ ಸೃಷ್ಟಿಸಿ, ಅಧಿಕಾರಕ್ಕೆ ಬರಲು ರಣತಂತ್ರ ರೂಪಿಸಿದ್ದಾರೆ. ರಾಜ್ಯದಲ್ಲಿ ಕೋಮು ಕಲಹ ಉಂಟು ಮಾಡಲು ಸುಮಾರು 3,800 ಆರೆಸ್ಸೆಸ್ ಕಾರ್ಯಕರ್ತರು ವಿಸ್ತಾರಕರಾಗಿ ಪ್ರತೀ ಜಿಲ್ಲೆ ಮತ್ತು ತಾಲೂಕಿಗೆ ನುಸುಳಿದ್ದಾರೆ ಎಂದು ಸಿಪಿಎಂ ನಾಯಕ ಜಿ.ವಿ.ಶ್ರೀರಾಮರೆಡ್ಡಿ ಆರೋಪಿಸಿದ್ದಾರೆ. ಕರ್ನಾಟಕದ ಪ್ರತೀ ವಿಧಾನಸಭಾ ಕ್ಷೇತ್ರಕ್ಕೆ 15 ಕೋಟಿ ರೂಪಾಯಿ ಖರ್ಚು ಮಾಡಲು ಕಾರ್ಪೊರೇಟ್ ಕಂಪೆನಿಗಳು ಮುಂದಾಗಿವೆ ಎಂದು ಹೇಳಲಾಗುತ್ತಿದೆ. ತಮಿಳುನಾಡಿನ ಪರಿಸ್ಥಿತಿ ಕೂಡ ಗಂಭೀರವಾಗಿದೆ. ದ್ರಾವಿಡ ಪಕ್ಷಗಳ ನಡುವಿನ ಒಡಕನ್ನು ಬಳಸಿಕೊಂಡು ಅಲ್ಲಿ ತನ್ನ ನೆಲೆ ಗಟ್ಟಿಗೊಳಿಸಿಕೊಳ್ಳಲು ಸಂಘ ಪರಿವಾರ ಯತ್ನ ನಡೆಸಿದೆ.

ಒಟ್ಟಾರೆ ದೇಶದ ಪ್ರಜಾಪ್ರಭುತ್ವ ಅಪಾಯದಲ್ಲಿದೆ. ಪ್ರಜಾಪ್ರಭುತ್ವ ಮತ್ತು ಸಮಾಜವಾದ ಪದಗಳು ನಮ್ಮ ದೇಶಕ್ಕೆ ಪರಕೀಯ ಎಂದು ಆರೆಸ್ಸೆಸ್ ಸರಸಂಘ ಚಾಲಕ ಗೋಳ್ವಾಲ್ಕರ್ ಹೇಳುತ್ತಿದ್ದರು. ಸಮಾಜವಾದ ಎಂಬ ಪದವನ್ನು ಈಗಾಗಲೇ ಅಪ್ರಸ್ತುತಗೊಳಿಸಲಾಗಿದೆ. ಹಿಂದಿನ ಯುಪಿಎ ಸರಕಾರವೇ ನೆಹರೂ ಕಲ್ಪನೆಯ ಅಭಿವೃದ್ಧಿ ಮಾರ್ಗವನ್ನು ಕೈ ಬಿಟ್ಟಿತು. ಈಗಂತೂ ಸಂಘ ಪರಿವಾರವೇ ಪರೋಕ್ಷವಾಗಿ ಅಧಿಕಾರ ಸೂತ್ರ ಹಿಡಿದಿರುವ ಕಾರಣ ಸಮಾಜವಾದದ ಜೊತೆಗೆ ಪ್ರಜಾಪ್ರಭುತ್ವಕ್ಕೂ ಗಂಡಾಂತರ ಎದುರಾಗಿದೆ.

ನರೇಂದ್ರ ಮೋದಿ ಅವರಿಗೆ ದೊರೆತಿರುವ ಪ್ರಶ್ನಾತೀತ ಅಧಿಕಾರವನ್ನು ಬಳಸಿಕೊಂಡು ತಮ್ಮ ಕಲ್ಪನೆಯ ಹಿಂದೂ ರಾಷ್ಟ್ರವನ್ನು ನಿರ್ಮಿಸಲು ಆರೆಸ್ಸೆಸ್ ಸಕಲ ಸಿದ್ಧತೆ ನಡೆಸಿದೆ. ಈ ಕಾರ್ಯವ್ಯೆಹದ ಭಾಗವಾಗಿ ಮುಸ್ಲಿಮರು, ಕ್ರೈಸ್ತರು ಮತ್ತು ಕಮ್ಯುನಿಸ್ಟರ ಮೇಲೆ ದಾಳಿ ಆರಂಭವಾಗಿದೆ. ಕಮ್ಯುನಿಸ್ಟರು, ಮುಸ್ಲಿಮರು ಮತ್ತು ಕ್ರೈಸ್ತರು ತಮ್ಮ ಶತ್ರುಗಳೆಂದು ಗೋಳ್ವಾಲ್ಕರ್ ಹೇಳಿದ್ದರು. ಕಮ್ಯುನಿಸ್ಟರು ಎಂದರೆ ಅದರಲ್ಲಿ ಸೋಶಿಯಲಿಸ್ಟರು ಸೇರಿದಂತೆ ಎಲ್ಲಾ ಎಡಪಂಥೀಯರು ಬರುತ್ತಾರೆಂದು ಅವರ ಅಭಿಪ್ರಾಯವಾಗಿತ್ತು. ಸದ್ಯಕ್ಕೆ ಪ್ರಜಾಪ್ರಭುತ್ವಕ್ಕೆ ಗಂಡಾಂತರವಿಲ್ಲ. ಆದರೆ ಹೆಸರಿಗೆ ಮಾತ್ರ ಅದನ್ನು ಉಳಿಸಿಕೊಂಡು ಪ್ರತಿಪಕ್ಷ ಮುಕ್ತ ಭಾರತ ನಿರ್ಮಿಸುವುದು ಅವರ ಉದ್ದೇಶವಾಗಿದೆ.

ಮುಂಬರುವ 2019ರ ಲೋಕಸಭಾ ಚುನಾವಣೆಯಲ್ಲಿ ಪ್ರತಿಪಕ್ಷವೇ ಇಲ್ಲದಂತೆ ಮಾಡುವ ಕಾರ್ಯಸೂಚಿಯನ್ನು ಸಂಘ ಪರಿವಾರ ಸಿದ್ಧಪ ಡಿಸಿದೆ. ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿಯದ್ದು ಅನುಕೂಲ ಸಿಂಧು ನೀತಿ. ತಮ್ಮದೇ ಪಕ್ಷ ಅಧಿಕಾರದಲ್ಲಿ ಇರುವ ಮಧ್ಯಪ್ರದೇಶದಲ್ಲಿ ಸಾವಿರಾರು ಕೋಟಿ ರೂಪಾಯಿ ಮೌಲ್ಯದ ವ್ಯಾಪಂ ಹಗರಣ ನಡೆದು, 40 ಕೊಲೆಗಳಾದರೂ ಅದನ್ನು ಮುಚ್ಚಿ ಹಾಕಿ, ಅಲ್ಲಿನ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ಅವರನ್ನು ರಕ್ಷಿಸಲಾಗಿದೆ.

ಇದು ಇಂದಿನ ಭಾರತದ ಸ್ಥಿತಿ. ವಿಷಾದದ ಸಂಗತಿಯೆಂದರೆ, ಪ್ರತಿಪಕ್ಷದಲ್ಲೂ ಏಕತೆ ಕಂಡು ಬರುತ್ತಿಲ್ಲ. ಪ್ರತಿರೋಧ ಕೇವಲ ಸಾಂಕೇತಿಕ ಆಗುತ್ತಿದೆ. ಜನ ಹೋರಾಟಗಳ ಅಲೆಯೂ ಏಳುತ್ತಿಲ್ಲ. ಅನ್ಯಾಯದ ವಿರುದ್ಧ ಹೋರಾಟ ಮಾಡಬೇಕಾದ ಯುವಕರು ಗೋ ರಕ್ಷಾ ಪಡೆಗಳಲ್ಲಿ ಸೇರಿ, ಅಮಾಯಕರನ್ನು ಕೊಲ್ಲುತಿ ್ತದ್ದಾರೆ. ನಿರ್ಣಾಯಕ ಪಾತ್ರ ವಹಿಸಬೇಕಿದ್ದ ಸಂಘಟಿತ ಕಾರ್ಮಿಕ ವರ್ಗ ಜಾತಿ, ಮತಗಳ ಹೆಸರಿನಲ್ಲಿ ಛಿದ್ರವಾಗಿವೆ. ಅಂತಲೇ ಪರಿಣಾಮಕಾರಿ ಪ್ರತಿರೋಧವಿಲ್ಲದೇ ಮೋದಿ ರಥಯಾತ್ರೆ ಸಾಗುತ್ತಿದೆ. ಇದು ಎಲ್ಲಿಗೆ ತಲುಪುತ್ತದೆ ಎಂದು ಈಗಲೇ ಹೇಳಲು ಸಾಧ್ಯವಿಲ್ಲ.

share
ಸನತ್ ಕುಮಾರ್ ಬೆಳಗಲಿ
ಸನತ್ ಕುಮಾರ್ ಬೆಳಗಲಿ
Next Story
X