ಎಡಿಜಿಪಿ ರಾವ್, ಡಿಐಜಿ ರೂಪಾ ಸೇರಿದಂತೆ ಐವರು ಐಪಿಎಸ್ ಅಧಿಕಾರಿಗಳ ವರ್ಗಾವಣೆ

ಬೆಂಗಳೂರು, ಜು.17: ಪರಪ್ಪನ ಅಗ್ರಹಾರ ಜೈಲಿನ ಅವ್ಯವಹಾರವನ್ನು ಬಯಲಿಗೆಳೆದ ಡಿಐಜಿ ರೂಪಾ , ಅವ್ಯವಹಾರ ಆರೋಪ ಹೊತ್ತ ಕಾರಾಗೃಹ ಎಡಿಜಿಪಿ ಎನ್ ಎಚ್ ಸತ್ಯನಾರಾಯಣ ರಾವ್ ಸೇರಿದಂತೆ ಐವರು ಐಪಿಎಸ್ ಅಧಿಕಾರಿಗಳನ್ನು ಸರಕಾರ ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ.
ಡಿ.ರೂಪಾ ಸಾರಿಗೆ ಸುರಕ್ಷತಾ ವಿಭಾಗದ ಡಿಐಜಿಯಾಗಿ ವರ್ಗಾಯಿಸಲಾಗಿದೆ. ರೂಪಾ ಜೊತೆ ಜೈಲಿನ ಅವ್ಯಹಾರದ ವಿಚಾರದಲ್ಲಿ ವಾಗ್ವಾದ ನಡೆಸಿದ ಕಾರಾಗೃಹ ಇಲಾಖೆಯ ಎಡಿಜಿಪಿ ಎಚ್ ಎನ್ ಸತ್ಯನಾರಾಯಣ ರಾವ್ ಅವರನ್ನು ಹುದ್ದೆಯಿಂದ ವರ್ಗಾವಣೆ ಮಾಡಲಾಗಿದ್ದು, ಆದರೆ ಸ್ಥಳ ನೀಡಲಾಗಿಲ್ಲ. ಅವರು ಜುಲೈ 22 ರಂದು ನಿವೃತ್ತರಾಗಲಿದ್ದಾರೆ.
ಎಚ್ ಎನ್ ಸತ್ಯನಾರಾಯಣ ರಾವ್ ಅವರ ವರ್ಗಾವಣೆಯಿಂದ ತೆರವಾದ ಜಾಗಕ್ಕೆ ಎಡಿಜಿಪಿ ಎನ್ ಎಸ್ ಮೇಘರಿಕ್ ಅವರನ್ನು ನೇಮಿಸಲಾಗಿದೆ
ಪರಪ್ಪನ ಅಗ್ರಹಾರ ಜೈಲು ಪ್ರಕರಣ, ಬಂಟ್ವಾಳದ ಗಲಭೆ ಪ್ರಕರಣದಲ್ಲಿ ಗುಪ್ತಚರ ಇಲಾಖೆಯ ವೈಫಲ್ಯದ ಹಿನ್ನೆಲೆಯಲ್ಲಿ ಡಿಜಿಪಿ ಎಂಎನ್ ರೆಡ್ಡಿ ವಿರುದ್ಧ ಸಿಎಂ ಸಿದ್ದರಾಮಯ್ಯ ಅಸಮಾಧಾನಗೊಂಡಿದ್ದರು. ಅವರನ್ನು ಭ್ರಷ್ಟಾಚಾರ ನಿಗ್ರಹ ದಳದ ಡಿಜಿಪಿಯಾಗಿ ವರ್ಗಾಯಿಸಲಾಗಿದೆ.
ಎಎಸ್ ಎನ್ ಮೂರ್ತಿ ಎಡಿಜಿಪಿ ಅರಣ್ಯ ವಿಭಾಗ ಮತ್ತು ಅಮೃತ ಪಾಲ್ ಅವರು ಗುಪ್ತಚರ ಇಲಾಖೆಯ ಡಿಜಿಪಿಯಾಗಿ ವರ್ಗಾವಣೆಗೊಳಿಸಲಾಗಿದೆ.
.







