Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ವಿಮಾ ಪಾಲಿಸಿ ಖರೀದಿಯ ನಂತರದ ನಿಮ್ಮ...

ವಿಮಾ ಪಾಲಿಸಿ ಖರೀದಿಯ ನಂತರದ ನಿಮ್ಮ ಹಕ್ಕುಗಳ ಬಗ್ಗೆ ಗೊತ್ತೇ?

ವಾರ್ತಾಭಾರತಿವಾರ್ತಾಭಾರತಿ17 July 2017 2:35 PM IST
share
ವಿಮಾ ಪಾಲಿಸಿ ಖರೀದಿಯ ನಂತರದ ನಿಮ್ಮ ಹಕ್ಕುಗಳ ಬಗ್ಗೆ ಗೊತ್ತೇ?

 ಇಂದಿನ ಧಾವಂತದ ದಿನಗಳಲ್ಲಿ ತಮ್ಮ ಕುಟುಂಬದ ಆರ್ಥಿಕ ಭದ್ರತೆಗಾಗಿ ಜೀವವಿಮೆ ಪ್ರತಿಯೊಬ್ಬರಿಗೂ ಅತ್ಯಗತ್ಯವಾಗಿದೆ. ಹೆಚ್ಚಿನವರು ವಿಮಾ ಪಾಲಿಸಿ ಖರೀದಿಸಿದ ನಂತರ ಅದನ್ನು ಭದ್ರವಾಗಿಟ್ಟು ಕಾಲಕಾಲಕ್ಕೆ ವಿಮಾಕಂತುಗಳನ್ನು ತುಂಬುತ್ತಿರುತ್ತಾರೆಯೇ ಹೊರತು ಕಂಪನಿಯಿಂದ ತಾವು ಪಡೆದುಕೊಳ್ಳಬಹುದಾದ ಸೇವೆಯ ಹಕ್ಕುಗಳ ಬಗ್ಗೆ ತಿಳಿದುಕೊಳ್ಳುವ ಗೋಜಿಗೆ ಹೋಗುವುದಿಲ್ಲ. ಇಲ್ಲಿವೆ ಅಂತಹ ಕೆಲವು ಹಕ್ಕುಗಳು......

 ವಿಮಾ ಪಾಲಿಸಿಯನ್ನು ನೀವು ಸ್ವೀಕರಿಸಿದ ಬಳಿಕ ಅದರಿಂದ ದೊರೆಯುವ ಲಾಭಗಳ ಬಗ್ಗೆ ಚಿಂತನೆ ನಡೆಸುವ ಮತ್ತು ಖರೀದಿ ನಿರ್ಧಾರವನ್ನು ಪುನರ್‌ಪರಿಶೀಲಿಸುವ ಹಕ್ಕು ನಿಮಗಿದೆ. ನೀವು ಖರೀದಿಸಿರುವ ಯೋಜನೆಯು ಲಾಭಕರವಲ್ಲ ಎಂದು ನಿಮಗೆ ಕಂಡುಬಂದರೆ 15 ದಿನಗಳೊಳಗೆ ನೀವದನ್ನು ಕಂಪನಿಗೆ ವಾಪಸ್ ಮಾಡಬಹುದಾಗಿದೆ. ಇಂತಹ ಸಂದರ್ಭದಲ್ಲಿ ಮಾರ್ಟಿಲಿಟಿ ಮತ್ತು ಸ್ಟಾಂಪ್ ಶುಲ್ಕ ಕಡಿತಕ್ಕೊಳಪಟ್ಟು ನೀವು ಪಾವತಿಸಿದ ಪ್ರೀಮಿಯಂ ಮೊತ್ತವನ್ನು ವಾಪಸ್ ಪಡೆಯುವ ಹಕ್ಕು ನಿಮಗಿದೆ.

ಯುನಿಟ್ ಲಿಂಕ್ಡ್ ವಿಮಾ ಯೋಜನೆಯಾದರೆ ಕಂಪನಿಯು ಮೇಲಿನ ಶುಲ್ಕಗಳನ್ನು ಕಡಿತಗೊಳಿಸಿದ ಬಳಿಕ ಪಾಲಿಸಿಯನ್ನು ರದ್ದುಗೊಳಿಸುವ ದಿನದ ಯುನಿಟ್ ವೌಲ್ಯವನ್ನು ಲೆಕ್ಕ ಹಾಕಿ ಯುನಿಟ್‌ಗಳ ಮೊತ್ತವನ್ನು ಮರಳಿಸುತ್ತದೆ.

ಪಾಲಿಸಿದಾರರು ತಾವು ಖರೀದಿಸಲು ಬಯಸಿರುವ ಪಾಲಿಸಿಯಲ್ಲಿನ ಹೂಡಿಕೆ ನೀತಿಗಳನ್ನು ತಿಳಿದುಕೊಳ್ಳುವ ಹಕ್ಕನ್ನೂ ಹೊಂದಿದ್ದಾರೆ.
  ಯುಲಿಪ್ ಯೋಜನೆಯು ಶೇರು ಮಾರುಕಟ್ಟೆಯೊಂದಿಗೆ ತಳುಕು ಹಾಕಿಕೊಂಡಿರು ವುದರಿಂದ ನೀವು ನಿವ್ವಳ ಆಸ್ತಿ ವೌಲ್ಯ(ಎನ್‌ಎವಿ)ದ ಇತ್ತೀಚಿನ ಮಾಹಿತಿಗಳನ್ನು ಮತ್ತು ವಾರ್ಷಿಕ ಅಕೌಂಟ್ ಸ್ಟೇಟ್‌ಮೆಂಟ್ ಪಡೆದುಕೊಳ್ಳಬಹುದು. ಒಂದು ಫಂಡ್‌ನಿಂದ ಇನ್ನೊಂದು ಫಂಡ್‌ಗೆ ವರ್ಗಾವಣೆಗೊಳ್ಳುವ ಹಕ್ಕೂ ನಿಮಗಿದೆ.

 ನೀವು ಆಯ್ದುಕೊಂಡ ಜೀವವಿಮೆ ಯೋಜನೆ ಅಥವಾ ಕಂಪನಿಯ ಸೇವೆಗಳು ನಿಮಗೆ ತೃಪ್ತಿ ನೀಡದಿದ್ದರೆ ನೀವು ಕಂಪನಿಯ ನೋಡಲ್ ಅಧಿಕಾರಿಯ ಬಳಿ ದೂರು ದಾಖಲಿಸಬಹುದು. ಕಂಪನಿಯ ಉತ್ತರವು ತೃಪ್ತಿಕರವಿಲ್ಲದಿದ್ದಲ್ಲಿ ಗ್ರಾಹಕರ ನ್ಯಾಯಾಲಯ ಅಥವಾ ಓಂಬುಡ್ಸ್‌ಮನ್‌ಗೆ ದೂರು ಸಲ್ಲಿಸಬಹುದು.
ಪಾಲಿಸಿಯು ಊರ್ಜಿತದಲ್ಲಿದ್ದಾಗ ಪಾಲಿಸಿದಾರ ನಿಧನನಾದರೆ ವಾರಸುದಾರರು ವಿಮಾ ಮೊತ್ತಕ್ಕೆ ಕೋರಿಕೆ ಸಲ್ಲಿಸಿದ 15 ದಿನಗಳಲ್ಲಿ ಕಂಪನಿಯು ಅಗತ್ಯ ದಾಖಲೆಗಳ ಬಗ್ಗೆ ಅವರಿಗೆ ಮಾಹಿತಿ ನೀಡಬೇಕಾಗುತ್ತದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ಅಗತ್ಯವಿದ್ದರೆ ಅದನ್ನು ಕಂಪನಿಯು 180 ದಿನಗಳಲ್ಲಿ ಪೂರ್ಣಗೊಳಿಸಬೇಕಾಗುತ್ತದೆ.

ಯಾವುದೇ ಹೆಚ್ಚಿನ ತನಿಖೆ ಅಗತ್ಯವಿಲ್ಲದಿದ್ದರೆ ಕಂಪನಿಯು ವಾರಸುದಾರರಿಂದ ಎಲ್ಲ ಅಗತ್ಯ ದಾಖಲೆಗಳನ್ನು ಪಡೆದುಕೊಂಡ 30 ದಿನಗಳಲ್ಲಿ ವಿಮಾಹಣವನ್ನು ಪಾವತಿಸ ಬೇಕಾಗುತ್ತದೆ.

ವಿಮಾದಾರ ಬದುಕಿದ್ದು ಪಾಲಿಸಿಯು ಪಕ್ವಗೊಂಡಿದ್ದರೆ ಕಂಪನಿಯು ಪಕ್ವತಾ ದಿನಾಂಕಕ್ಕೆ ಕನಿಷ್ಠ ಎರಡು ತಿಂಗಳ ಮೊದಲು ಪಾಲಿಸಿ ಹಣವನ್ನು ಆತನಿಗೆ ಯಾವಾಗ ಪಾವತಿಸಲಾ ಗುತ್ತದೆ ಎನ್ನುವುದನ್ನು ಪತ್ರಮುಖೇನ ತಿಳಿಸಬೇಕಾಗುತ್ತದೆ.

ಪಾಲಿಸಿದಾರನಿಂದ ಅಗತ್ಯ ದಾಖಲೆಗಳನ್ನು ಸ್ವೀಕರಿಸಿದ 30 ದಿನಗಳಲ್ಲಿ ಪಾಲಿಸಿಯ ಹಣವನ್ನು ಆತನಿಗೆ ಪಾವತಿಸುವುದು ಕಡ್ಡಾಯವಾಗಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X