ನಟಿಗೆ ಕಿರುಕುಳ ಪ್ರಕರಣ: ಒಂದು ಮೆಮೊರಿ ಕಾರ್ಡ್ ಪತ್ತೆ

ಕೊಚ್ಚಿ,ಜು.17: ನಟಿಯನ್ನು ಅಪಹರಿಸಿ ಕಿರುಕುಳ ನೀಡಿದ ಪ್ರಕರಣದಲ್ಲಿ ತನಿಖಾ ತಂಡ ಒಂದು ಮೆಮೊರಿ ಕಾರ್ಡ್‍ನ್ನು ಪತ್ತೆಹಚ್ಚಿದೆ. ಅಡ್ವೊಕೇಟ್ ಪ್ರತೀಶ್ ಚಾಕೊರ ಜೂನಿಯರ್ ಆಗಿ ಪ್ರಾಕ್ಟಿಸ್ ಮಾಡುವ ರಾಜು ಜೋಸೆಫ್‍ರ ಬಳಿಯಿದ್ದ ಮೆಮೊರಿ ಕಾರ್ಡನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮುಖ್ಯ ಆರೋಪಿ ಸುನೀಲ್ ಕುಮಾರ್ ನಟಿಗೆ ಕಿರುಕುಳ ನೀಡಿದ್ದನ್ನು ಈ ಮೆಮೊರಿ ಕಾರ್ಡಿನಲ್ಲಿ ಚಿತ್ರೀಕರಿಸಲಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಆದರೆ, ಇದರಲ್ಲಿ ಅಂತಹ ಯಾವುದೇ ದೃಶ್ಯಗಳಲಿಲ್ಲ. ದೃಶ್ಯಗಳನ್ನು ಡಿಲಿಟ್ ಮಾಡಿರಬಹುದೇ ಎಂದು ಪರಿಶೀಲಿಸಲು ಮೆಮೊರಿಕಾರ್ಡನ್ನು ಫಾರೆನ್ಸಿಕ್ ಲ್ಯಾಬ್‍ಗೆ ಪೊಲೀಸರು ಕಳುಹಿಸಲಿದ್ದಾರೆ.
ಅಡ್ವೊಕೇಟ್ ರಾಜು ಜೋಸೆಫ್‍ರನ್ನು ನಿನ್ನೆ ತನಿಖಾ ತಂಡ ಕಸ್ಟಡಿಗೆ ಪಡೆದು ಬಿಡುಗಡೆಗೊಳಿಸಿದೆ. ವಕೀಲ ಪ್ರತೀಶ್ ಚಾಕೊರಿಗೆ ಮೆಮೊರಿಕಾರ್ಡ್ ನೀಡಿದ್ದೇನೆ ಎಂದು ಪ್ರಕರಣದ ಮುಖ್ಯ ಆರೋಪಿ ಪಲ್ಸರ್ ಸುನಿ ಹೇಳಿದ್ದಾನೆ. ಪ್ರತೀಶ್ ಚಾಕೊರನ್ನು ಬಂಧಿಸಲುಪೊಲೀಸರಿಗೆ ಈವರೆಗೆ ಸಾಧ್ಯವಾಗಿಲ್ಲ.
Next Story





