ಅನಾರೋಗ್ಯ ಪೀಡಿತ ಮಹಿಳೆಯ ಶಸ್ತ್ರಚಿಕಿತ್ಸೆಗೆ ಸಹಾಯ ಹಸ್ತ

ಮೂಡಿಗೆರೆ, ಜು.17: ಉದರ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ವಹೀದ ಸಾಬಿಕ್ (50)ರವರಿಗೆ ವಿವಿಧ ಸಂಘಟನೆಗಳು ಧನ ಸಹಾಯ ಮಾಡುವ ಮೂಲಕ ನೆರವಾಗಿದ್ದಾರೆ.
ಉದರ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ವಹೀದಾ ಸಾಬಿಕ್ ವರು ಮಂಗಳೂರಿನ ದೇರಳಕಟ್ಟೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಿಗೆ ಶಸ್ತ್ರ ಚಿಕಿತ್ಸೆ ಅನಿವಾರ್ಯವಾಗಿದ್ದು, ಕುಟುಂಬಸ್ಥರು ಯಾರೂ ಇಲ್ಲದೆ ಸಂಕಷ್ಟದಲ್ಲಿರುವ ಬಗ್ಗೆ ಸಮಾಜ ಸೇವಕ ಫಿಶ್‌ಮೋಣುರವರು ಆರ್ಥಿಕವಾಗಿ ಹಿಂದುಳಿದಿರುವ ಬಡ ಮಹಿಳೆಗೆ ಧನಸಹಾಯ ಮಾಡುವ ಮೂಲಕ ಶಸ್ತ್ರ ಚಿಕಿತ್ಸೆಗೆ ನೆರವಾಗುವಂತೆ ಸಾಮಾಜಿಕ ಜಾಲತಾಣದಲ್ಲಿ ಮನವಿ ಮಾಡಿಕೊಂಡಿದ್ದರು.
ಅಲ್ಲದೆ ಅವರು ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳ ಗಮನಕ್ಕೆ ತಂದಿದ್ದರು. ಈ ಹಿನ್ನೆಲೆಯಲ್ಲಿ ಮಹಿಳೆಗೆ ಮಲೆನಾಡು ಗಲ್ಫ್ ಅಸೋಷಿಯೇಷನ್ ಸದಸ್ಯರು 25 ಸಾವಿರ ಧನಸಹಾಯ ಮಾಡಿದ್ದಾರೆ. ಯುಎಇ ವೆಲ್ಫೇರ್ ಅಸೋಷಿಯೇಷನ್ ಸದಸ್ಯರು 10 ಸಾವಿರ ರೂ.ಗಳ ಸಹಾಯ ಧನವನ್ನು ಅನಾರೋಗ್ಯ ಮಹಿಳೆಗೆ ಕಳುಹಿಸಿಕೊಟ್ಟಿದ್ದಾರೆ.
ಈ ವೇಳೆ ಮಲೆನಾಡು ಗಲ್ಫ್ ಅಸೋಷಿಯೇಷನ್ ಸದಸ್ಯರಾದ ಫಾರೂಕ್ ಬಿಳಗುಳ, ಹನೀಫ್ ಬಿಳಗುಳ, ಹಮೀದ್ ಸಬ್ಬೇನಹಳ್ಳಿ, ಹಸನ್ ಕೊಟ್ಟಿಗೆಹಾರ ಹಾಗೂ ಯುಎಇ ವೆಲ್ಫೇರ್ ಅಸೋಷಿಯೇಷನ್ ಅಧ್ಯಕ್ಷ ಅಬ್ದುಲ್ ರಹಮಾನ್, ಮಹಮ್ಮದ್ ಆರಿಫ್, ಆಸೀಫ್ ಅಲಿಖಾನ್. ಮಹಮ್ಮದ್ ಹನೀಫ್, ಫಿಶ್ ಮೋಣು ಮತ್ತಿತರರಿದ್ದರು







