ಹಿರಿಯ ಆರೋಗ್ಯ ಸಹಾಯಕ ಸೇರಿ ನಾಲ್ಕು ಮಂದಿಗೆ ಡೆಂಗ್ ಜ್ವರ

ಭಟ್ಕಳ,ಜು.17: ಡೆಂಗ್ ಮಹಮಾರಿ ಭಟ್ಕಳದಲ್ಲಿ ಮತ್ತೊಮ್ಮೆತನ್ನಅಟ್ಟಹಾಸ ಮೆರೆದಿದ್ದು ಹಿರಿಯ ಆರೋಗ್ಯ ಸಹಾಯಕ ಸೇರಿದಂತೆ ನಾಲ್ಕು ಮಂದಿಗೆ ಈ ಡೆಂಗ್ ಜ್ವರ ಕಾಣಿಸಿಕೊಂಡಿದೆ ತಿಳಿದುಬಂದಿದೆ.
ಡೆಂಗ್ ಪೀಡಿತರನ್ನುತಾಲೂಕಿನ ಹಿರಿಯ ಆರೋಗ್ಯಸಹಾಯಕ ಈರಯ್ಯ ದೇವಾಡಿಗ (57), ತಾಲೂಕಿನ ಹಡೀನ್ ನಿವಾಸಿ ಮಂಜುನಾಥರಂಗಪ್ಪ ನಾಯ್ಕ (24), ಮುರುಡೇಶ್ವರ ಶಿರಾಣಿಯ ಸುಪ್ರೀತಾ ಪರಮೇಶ್ವರ ಭಟ್ (20), ಮಾವಿನಕುರ್ವೆಕರಿಕಲ್ ನಿವಾಸಿ ಮಂಜುನಾಥ ಅಣ್ಣಪ್ಪ ಮೊಗೇರ ಎನ್ನುವವರೇ ಡೆಂಗ್ ಪೀಡಿತರಾಗಿದ್ದು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪೆಡೆದು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ.
2017ರಲ್ಲಿ ತಾಲೂಕಿನಲ್ಲಿ ಡೆಂಗ್ ಪ್ರಕರಣ 5ಕ್ಕೆ ಏರಿಕೆಯನ್ನು ಕಂಡಿದೆ.
ಜನರು ಸಣ್ಣಪುಟ್ಟ ಜ್ವರದ ಬಗ್ಗೆ ನಿರ್ಲಕ್ಷ್ಯವನ್ನು ತಾಳದೇ ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು ಹಾಗೂ ಸುತ್ತಮುತ್ತಲಿನ ಪರಿಸರ ಸ್ವಚ್ಛತೆಗೆ ಹೆಚ್ಚಿನಒತ್ತನ್ನು ನೀಡಬೇಕುಎಂದುಆರೋಗ್ಯ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
Next Story





