ಹಳೆಯ ನೋಟು ಜಮೆಗೆ ಇನ್ನಷ್ಟು ಕಾಲಾವಕಾಶ ಇಲ್ಲ: ಸುಪ್ರೀಂಗೆ ಕೇಂದ್ರ ಸರಕಾರದ ಉತ್ತರ

ಹೊಸದಿಲ್ಲಿ, ಜು.17: ನೋಟು ಅಮಾನ್ಯೀಕರಣದ ಉದ್ದೇಶವೇ ವಿಫಲವಾಗುವ ಕಾರಣ ಹಳೆಯ ನೋಟುಗಳ ಜಮೆಗೆ ಇನ್ನಷ್ಟು ಕಾಲಾವಕಾಶ ನೀಡಲಾಗದು ಎಂದು ಕೇಂದ್ರ ಸರಕಾರ ಸುಪ್ರೀಂಕೋರ್ಟ್‌ಗೆ ತಿಳಿಸಿದೆ.
ಕಾಳಧನವನ್ನು ನಿರ್ಮೂಲಗೊಳಿಸುವ ಉದ್ದೇಶ ನೋಟು ಅಮಾನ್ಯೀಕರಣದ ಪ್ರಕ್ರಿಯೆಯ ಹಿಂದಿದೆ. ಆದ್ದರಿಂದ 2016ರ ಡಿ.30ರವರೆಗೆ ಹಳೆಯ ನೋಟು(1000ರೂ. ಮತ್ತು 500 ರೂ.)ಗಳ ಜಮೆಗೆ ಅವಕಾಶ ನೀಡಲಾಗಿತ್ತು. ಇದೀಗ ಈ ಅವಕಾಶ ವಿಸ್ತರಿಸಿದರೆ ಉದ್ದೇಶವೇ ವಿಫಲವಾಗುತ್ತದೆ ಎಂದು ಕೇಂದ್ರ ವಿತ್ತ ಸಚಿವಾಲಯ ಸುಪ್ರೀಂಕೋರ್ಟ್‌ಗೆ ತಿಳಿಸಿದೆ.
ಹಳೆಯ ನೋಟುಗಳನ್ನು ಹೊಂದಿದ್ದವರಿಗೆ ಅವನ್ನು ಬದಲಾಯಿಸಿಕೊಳ್ಳಲು ಸೂಕ್ತ ಹಾಗೂ ಸಾಕಷ್ಟು ಅವಕಾಶ ನೀಡಲಾಗಿದೆ. ಇನ್ನಷ್ಟು ಅವಕಾಶ ನೀಡುವುದರಿಂದ ನೋಟು ಅಮಾನ್ಯೀಕರಣದ ಪ್ರಕ್ರಿಯೆಯ ಉದ್ದೇಶವೇ ವಿಫಲವಾಗುತ್ತದೆ ಎಂಬುದನ್ನು ನ್ಯಾಯಾಲಯದ ಮುಂದೆ ಅರಿಕೆ ಮಾಡಿಕೊಳ್ಳಲಾಗಿದೆ ಎಂದು ಸರಕಾರದ ಅಫಿದಾವಿತ್‌ನಲ್ಲಿ ತಿಳಿಸಲಾಗಿದೆ.
Next Story





