ವಕೀಲರ ಭವಿಷ್ಯ ನಿಧಿ ಕಾಯ್ದೆ ತಿದ್ದುಪಡಿ ತರಲು ಸಾಧ್ಯವೇ: ಸರಕಾರವನ್ನು ಪ್ರಶ್ನಿಸಿದ ಹೈಕೋರ್ಟ್
ಬೆಂಗಳೂರು, ಜು.17: ವಕೀಲರ ಭವಿಷ್ಯ ನಿಧಿಯಲ್ಲಿ ನಡೆಯುತ್ತಿರುವ ತಾರತಮ್ಯ ಹೋಗಲಾಡಿಸಲು ಕಾಯ್ದೆಗೆ ತಿದ್ದುಪಡಿ ತರಲು ಸಾಧ್ಯವೇ ಎಂದು ಸರಕಾರವನ್ನು ಹೈಕೋರ್ಟ್ ಪ್ರಶ್ನಿಸಿದೆ.
ಈ ಸಂಬಂಧ ಕೆಲ ವಕೀಲರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅಶೋಕ್ ಬಿ. ಹಿಂಚಿಗೇರಿ ಅವರಿದ್ದ ನ್ಯಾಯಪೀಠ ವಕೀಲರ ಭವಿಷ್ಯ ನಿಧಿ ಪರಿಹಾರದ ಗೈಡ್‌ಲೈನ್ಸ್ ಬಗ್ಗೆ ಹಾಗೂ ಪರಿಹಾರ ನೀಡಿಕೆಯಲ್ಲಿನ ತಾರತಮ್ಯದ ಬಗ್ಗೆ ವರದಿಯನ್ನು ನೀಡಲು ಸರಕಾರಕ್ಕೆ ಸೂಚಿಸಿದೆ. ಅಲ್ಲದೆ, ವಕೀಲರ ಭವಿಷ್ಯ ನಿಧಿ ಪರಿಹಾರ ನೀಡಿಕೆಯಲ್ಲಿ ನಡೆಯುತ್ತಿರುವ ತಾರತಮ್ಯವನ್ನು ಹೋಗಲಾಡಿಸಲು ಕಾಯ್ದೆಯನ್ನು ತಿದ್ದುಪಡಿ ತರಲು ಸಾಧ್ಯವೇ ಎಂಬುದನ್ನು ಹೈಕೋರ್ಟ್‌ಗೆ ಸರಕಾರ ತಿಳಿಸಬೇಕೆಂದು ಸೂಚಿಸಿದೆ. ವಕೀಲರ ಭವಿಷ್ಯ ನಿಧಿ ಪರಿಹಾರಕ್ಕೆ ಸಂಬಂಧಿಸಿದಂತೆ ಗೈಡ್‌ಲೈನ್ಸ್‌ಗಳನ್ನು ಯಾವ ರೀತಿಯಾಗಿ ಮಾಡಿದ್ದೀರಿ ಎಂಬ ವರದಿಯನ್ನೂ ನ್ಯಾಯಾಲಯಕ್ಕೆ ತಿಳಿಸಬೇಕೆಂದು ಸೂಚಿಸಿ ಅರ್ಜಿ ವಿಚಾರಣೆಯನ್ನು ಮುಂದೂಡಿತು.
Next Story







