ಬಸ್ ಢಿಕ್ಕಿ:ವ್ಯಕ್ತಿ ಸಾವು

ಮಂಡ್ಯ, ಜು.17: ಖಾಸಗಿ ಬಸ್ ಢಿಕ್ಕಿಯಾಗಿ ವ್ಯಕ್ತಿಯೊಬ್ಬ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮಳವಳ್ಳಿ ಪಟ್ಟಣದಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ.
ಪಟ್ಟಣದ ಪೇಟೆಬೀದಿ ನಿವಾಸಿ ಬೊಮ್ಮೇಗೌಡ(56) ಸಾವನ್ನಪ್ಪಿದ ವ್ಯಕ್ತಿ. ಇವರು ಪೆಟ್ರೋಲ್ ಬಂಕ್ ಪಕ್ಕದ ತಡೆಗೋಡೆ ಸಮೀಪ ಮೂತ್ರವಿಸರ್ಜನೆ ಮಾಡುತ್ತಿದ್ದಾಗ ಬಸ್ ಹಿಮ್ಮುಖವಾಗಿ ಚಲಿಸಿದ ಬಸ್ ಢಿಕ್ಕಿಯಾಗಿ ಈ ಘಟನೆ ಸಂಭವಿಸಿದೆ.
ಬಸ್ ಚಾಲಕನ ವಿರುದ್ಧ ಪಟ್ಟಣ ಪೊಲಿಸರು ಪ್ರಕರಣ ದಾಖಲಿಸಿದ್ದಾರೆ.
Next Story





