ಅಫ್ಘಾನ್: 2017 ಪ್ರಥಮಾರ್ಧದಲ್ಲಿ 1,662 ನಾಗರಿಕರು ಮೃತ

ಕಾಬೂಲ್, ಜು. 17: ಅಫ್ಘಾನಿಸ್ತಾನದಲ್ಲಿ 2017ರ ಪ್ರಥಮಾರ್ಧದಲ್ಲಿ 1,662 ನಾಗರಿಕರು ಮೃತಪಟ್ಟಿದ್ದಾರೆ ಹಾಗೂ 3,500 ಮಂದಿ ಗಾಯಗೊಂಡಿದ್ದಾರೆ ಎಂದು ವಿಶ್ವಸಂಸ್ಥೆ ಸೋಮವಾರ ತಿಳಿಸಿದೆ.
ಈ ಪೈಕಿ 20 ಶೇಕಡ ಸಾವು ರಾಜಧಾನಿ ಕಾಬೂಲ್‌ನಲ್ಲೇ ಸಂಭವಿಸಿದೆ ಎಂದು ಅಫ್ಘಾನಿಸ್ತಾನದಲ್ಲಿ ವಿಶ್ವಸಂಸ್ಥೆಯ ಸಹಾಯಕ ಘಟಕ (ಯುಎನ್‌ಎಎಂಎ) ತಿಳಿಸಿದೆ. ಈ ಸಂಸ್ಥೆಯು 2009ರಿಂದ ಅಪ್ಘಾನ್‌ನಲ್ಲಿ ಸಂಭವಿಸುವ ನಾಗರಿಕ ಸಾವುಗಳನ್ನು ದಾಖಲಿಸುತ್ತಿದೆ.
ಹೆಚ್ಚಿನ ನಾಗರಿಕರು ಸತ್ತಿರುವುದು ತಾಲಿಬಾನ್ ಮತ್ತು ಐಸಿಸ್ ಮುಂತಾದ ಸರಕಾರಿ ವಿರೋಧಿ ಗುಂಪುಗಳ ದಾಳಿಯಲ್ಲಿ ಎಂದು ವರದಿ ತಿಳಿಸಿದೆ.
Next Story





