ಮಂಗಳೂರಿನಿಂದ ದಮಾಮ್ ಗೆ ಹೊರಟಿದ್ದ ವಿಮಾನ ಮುಂಬೈಯಲ್ಲಿ ತುರ್ತು ಭೂಸ್ಪರ್ಶ
ಸಾಂದರ್ಭಿಕ ಚಿತ್ರ
ಮಂಗಳೂರು, ಜು.17: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದಮಾಮ್ಗೆ ಹೊರಟಿದ್ದ ವಿಮಾನವು ಪ್ರಯಾಣಿಕ ಮಹಿಳೆಯೋರ್ವರಿಗೆ ಕಾಣಿಸಿಕೊಂಡ ಹೊಟ್ಟೆ ನೋವಿನಿಂದ ಮುಂಬಯಲ್ಲಿ ತುರ್ತು ಇಳಿದ ಘಟನೆ ಸೋಮವಾರ ನಡೆದಿದೆ.
ಐ ಎಕ್ಸ್ 885 ಏರ್ ಇಂಡಿಯಾ ವಿಮಾನವು ಬಜ್ಪೆಯಿಂದ ದಮಾಮ್ಗೆ ಹೊರಟಿತ್ತು. ಮಾರ್ಗಮಧ್ಯೆ ವಿಮಾನದಲ್ಲಿದ್ದ 22 ವರ್ಷದ ಮಹಿಳೆಯೋರ್ವರಿಗೆ ಹಠಾತ್ ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಪೈಲಟ್ ಮಹಿಳೆಯ ವೈದ್ಯಕೀಯ ಚಿಕಿತ್ಸೆಗಾಗಿ ವಿಮಾನವನ್ನು ತುರ್ತಾಗಿ ಮುಂಬಯಿಯಲ್ಲಿ ಇಳಿಸಿದ್ದಾರೆ. ಮಹಿಳೆಗೆ ಕಿಡ್ನಿಸ್ಟೋನ್ನಿಂದಾಗಿ ಹೊಟ್ಟೆನೋವು ಕಾಣಿಸಿಕೊಂಡಿದೆ ಎಂದು ಹೇಳಲಾಗಿದೆ.
Next Story