ಡಿಸೈನ್ ಕೋಟಿಯೆಂಟ್ ಲ್ಯಾಬ್ಸ್ ಮಂಗಳೂರು ತರಬೇತಿ ಕೇಂದ್ರಕ್ಕೆ ಚಾಲನೆ

ಮಂಗಳೂರು, ಜು.17: ಡಿಸೈನ್ ಕೋಟಿಯೆಂಟ್ ಲ್ಯಾಬ್ಸ್(ಡಿಕ್ಯು ಲ್ಯಾಬ್ಸ್)ನ ಪ್ರಪ್ರಥಮ ತರಬೇತಿ ಕೇಂದ್ರವನ್ನು ಮಂಗಳೂರಿನಲ್ಲಿ ಉದ್ಘಾಟಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ‘ನಿಟ್ಟೆ ಇನ್‌ಸ್ಟಿಟ್ಯೂಟ್ ಆಫ್ ಆರ್ಕಿಟೆಕ್ಚರ್’ನ ನಿರ್ದೇಶಕ ವಿನೋದ್ ಅರಾನ್ಹ ಮಾತನಾಡಿ ವಿದ್ಯಾರ್ಥಿಗಳು ಓರ್ವ ನಿಷ್ಣಾತ ವಿನ್ಯಾಸಗಾರರಾಗಿ ರೂಪುಗೊಳ್ಳಲು ಉನ್ನತ ಮಟ್ಟದ ಸೃಜನಾತ್ಮಕತೆಯ ಅಗತ್ಯವಿದ್ದು ವಿದ್ಯಾರ್ಥಿಗಳಲ್ಲಿರುವ ಸೃಜನಾತ್ಮಕತೆಯನ್ನು ಗುರುತಿಸಿ ಅವರನ್ನು ವಿನ್ಯಾಸಗಾರರನ್ನಾಗಿ ರೂಪಿಸುವ ಕಾರ್ಯವನ್ನು ಡಿಕ್ಯು ಲ್ಯಾಬ್ಸ್ ಪರಿಣಾಮಕಾರಿಯಾಗಿ ನಡೆಸುತ್ತಿದೆ ಎಂದು ಶ್ಲಾಘಿಸಿದರು. ಅಲ್ಲದೆ ಡಿಕ್ಯು ಲ್ಯಾಬ್ಸ್ ಸಂಸ್ಥೆಯ ರ್ಯಾಂಕ್ ವಿಜೇತ ವಿದ್ಯಾರ್ಥಿಗಳನ್ನು ಗೌರವಿಸಿದರು.
ವಿನ್ಯಾಸ, ವಾಸ್ತುಶಿಲ್ಪ ಮತ್ತು ಫ್ಯಾಶನ್- ಈ ವಿಷಯಗಳಲ್ಲಿ ವಿದ್ಯಾರ್ಥಿಗಳಿಗೆ ನೀಡುವ ತರಬೇತಿಯ ಕುರಿತು ಸಂಸ್ಥೆಯ ಸಹಸಂಸ್ಥಾಪಕ ಉಮೇಶ್ ಕುಮಾರ್ ಮಾಹಿತಿ ನೀಡಿದರು. ಡಿಸೈನರ್ ಪದವಿ ಪಡೆದ ವಿದ್ಯಾರ್ಥಿಗಳಿಗೆ ಉತ್ತಮ ಉದ್ಯೋಗಾವಕಾಶವಿದೆ ಎಂದವರು ತಿಳಿಸಿದರು. ಸಹಸಂಸ್ಥಾಪಕ ಶಾನ್ ಡೇ‘ಸ, ಪ್ರಿನ್ಸಿಪಾಲ್ ಆರ್ಕಿಟೆಕ್ಟ್ ಲಿಯಾನ್ನೆ ರಾಡ್ರಿಗಸ್ ಮತ್ತಿತರರು ಈ ಸಂದರ್ಭ ಉಪಸ್ಥಿತರಿದ್ದರು.
ಯುಸಿಇಇಡಿ-2017 ( ಡಿಸೈನ್ ಅಧ್ಯಯನಕ್ಕೆ ಇರುವ ಪ್ರವೇಶ ಪರೀಕ್ಷೆ)ಯಲ್ಲಿ ರಾಷ್ಟ್ರಮಟ್ಟದಲ್ಲಿ 6ನೇ ರ್ಯಾಂಕ್ ಗಳಿಸಿದ ಡ್ಯಾರೆನ್ ಮ್ಯಾಥ್ಯೂ ಲೋಬೊ, 2017 ಕರ್ನಾಟಕ ಸಿಇಟಿಯ ಆರ್ಕಿಟೆಕ್ಟರ್ ವಿಭಾಗದಲ್ಲಿ ಕ್ರಮವಾಗಿ 9 ಮತ್ತು 14ನೇ ರ್ಯಾಂಕ್ ಗಳಿಸಿದ ಆದಿತ್ಯ ಕರಿಯ ಮತ್ತು ಕುಮಾರಿ ಫ್ರಿಝೆಲ್ ಡಿ‘ಸೋಝ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ನಗರದ ಬೆಂದೂರ್‌ವೆಲ್ ವೃತ್ತದ ಬಳಿ ಇರುವ ‘ವಿಲ್ಲಾ ರೋಸ್’ನ ದ್ವಿತೀಯ ಮಹಡಿಯಲ್ಲಿ ಡಿಕ್ಯು ಲ್ಯಾಬ್ಸ್ ಕಾರ್ಯಾಚರಿಸಲಿದ್ದು ಇಲ್ಲಿ ಕ್ಲಾಸ್‌ರೂಂ ತರಬೇತಿ, ಆನ್‌ಲೈನ್‌ನಲ್ಲಿ ಸ್ಟಡಿ ಮೆಟೀರಿಯಲ್ ಪೂರೈಕೆ ಇತ್ಯಾದಿ ವ್ಯವಸ್ಥೆಯಿದೆ. ಕರ್ನಾಟಕ ಸಿಇಟಿ(ಆರ್ಕಿಟೆಕ್ಚರ್)ಯಲ್ಲಿ ಅಗ್ರ 25 ರ್ಯಾಂಕ್ ಪಡೆದಿರುವ ವಿದ್ಯಾರ್ಥಿಗಳಲ್ಲಿ ಶೇ.50ಕ್ಕೂ ಹೆಚ್ಚು ಮಂದಿ ಡಿಕ್ಯು ಲ್ಯಾಬ್ಸ್‌ನ ವಿದ್ಯಾರ್ಥಿಗಳು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.







