ನಮ್ಮ ಮೆಟ್ರೋಗೆ ಚಿಲ್ಲರೆ ಸಹಿತ ಟಿಕೆಟ್ ಮೆಷಿನ್

ಬೆಂಗಳೂರು, ಜು.18: ನಮ್ಮ ಮೆಟ್ರೋದಲ್ಲಿ ಎದುರಾಗಿರುವ ಚಿಲ್ಲರೆ ಸಮಸ್ಯೆ ನಿವಾರಿಸಿ ಸಾರ್ವಜನಿಕ ಸಹಕಾರಿಯಾಗಿಸುವ ನಿಟ್ಟಿನಲ್ಲಿ ಚಿಲ್ಲರೆ ಸಹಿತ ಟಿಕೆಟ್ ನೀಡುವ ವೆುಷಿನ್ ಖರೀದಿ ಮಾಡಲು ಬಿಎಂಆರ್‌ಸಿಎಲ್ ಚಿಂತನೆ ನಡೆಸಿದೆ.
ವಿಶ್ವದ ಹಲವು ರಾಷ್ಟ್ರಗಳಲ್ಲಿ ಈಗಾಗಲೇ ಚಿಲ್ಲರೆ ಸಹಿತ ಟಿಕೆಟ್ ನೀಡುವ ಮೆಷಿನ್‌ಗಳನ್ನು ಅಳವಡಿಸಿಕೊಂಡಿದ್ದು, ಇದೀಗ ಇದನ್ನು ನಮ್ಮ ಮೆಟ್ರೋನಲ್ಲಿ ಅಳವಡಿಸಲು ಮುಂದಾಗಿದ್ದಾರೆ. ಇದರಿಂದಾಗಿ ಸಾರ್ವಜನಿಕರಿಗೆ ಚಿಲ್ಲರೆಯಿಂದ ಮುಕ್ತಿ ಸಿಗಲಿದೆ ಎಂದು ಅಧಿಕಾರಿಗಳು ಅಭಿಪ್ರಾಯಿಸಿದ್ದಾರೆ. ವಿಶ್ವದ ಹಲವು ರಾಷ್ಟ್ರಗಳಲ್ಲಿ ಈಗಾಗಲೇ ಚಿಲ್ಲರೆ ಸಹಿತ ಟಿಕೆಟ್ ನೀಡುವ ಮೆಷಿನ್‌ಗಳನ್ನು ಅಳವಡಿಸಿಕೊಂಡಿದ್ದು, ಇದೀಗ ಇದನ್ನು ನಮ್ಮ ಮೆಟ್ರೋನಲ್ಲಿ ಅಳವಡಿಸಲು ಮುಂದಾಗಿದ್ದಾರೆ. ಇದರಿಂದಾಗಿ ಸಾರ್ವಜನಿಕರಿಗೆ ಚಿಲ್ಲರೆಯಿಂದ ಮುಕ್ತಿ ಸಿಗಲಿದೆ ಎಂದು ಅಧಿಕಾರಿಗಳು ಅಭಿಪ್ರಾಯಿಸಿದ್ದಾರೆ. ನ
ಗರದ ಎಂ.ಜಿ.ರಸ್ತೆ, ಬೈಯಪ್ಪನಹಳ್ಳಿ, ಇಂದಿರಾನಗರದ ನಮ್ಮ ಮೆಟ್ರೋದಲ್ಲಿ ಸ್ವಯಂಚಾಲಿತ ಟಿಕೆಟ್ ಮೆಷಿನ್ ಅಳವಡಿಸಲಾಗಿದೆ. ಆದರೆ, ಸೂಕ್ತ ಪ್ರಮಾಣದ ಹಣ ಹಾಕಿದರೆ ಮಾತ್ರ ಟಿಕೆಟ್ ನೀಡುತ್ತಿದೆ. ಹೀಗಾಗಿ ಜನರು ಇಲ್ಲಿಂದ ಟಿಕೆಟ್ ಖರೀದಿ ಮಾಡಲು ನಿರಾಕರಿಸುತ್ತಿದ್ದಾರೆ. ಆದುದರಿಂದ ಚಿಲ್ಲರೆ ಸಹಿತ ಟಿಕೆಟ್ ನೀಡುವ ಮೆಷಿನ್ ಅಳವಡಿಸಲು ಬಿಎಂಆರ್‌ಸಿಎಲ್ ಮುಂದಾಗಿದೆ.





