ಜು.21ರಂದು ‘ಅರ್ಜುನ್ ವೆಡ್ಸ್ ಅಮೃತ’ ತೆರೆಗೆ
ಮಂಗಳೂರು, ಜು.18: ಬೆದ್ರ 9 ಕ್ರಿಯೇಷನ್ಸ್ ಲಾಂಛನದಲ್ಲಿ ತಯಾರಾದ ‘ಅರ್ಜುನ್ ವೆಡ್ಸ್ ಅಮೃತ’ ಸಿನೆಮಾವು ಚಿತ್ರೀಕರಣ ಪೂರ್ಣಗೊಂಡಿದ್ದು, ಜು.21ರಂದು ಕರಾವಳಿ ಜಿಲ್ಲೆಯಾದ್ಯಂತ ತೆರೆ ಕಾಣಲಿದೆ ಎಂದು ಚಿತ್ರದ ನಿರ್ದೇಶಕ ರಘುಶೆಟ್ಟಿ ತಿಳಿಸಿದ್ದಾರೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಚಿತ್ರವು ಏಕಕಾಲದಲ್ಲಿ ಮಂಗಳೂರಿನಲ್ಲಿ ಜ್ಯೋತಿ, ಸಿನಿಪೊಲಿಸ್, ಪಿಆರ್, ಬಿಗ್ ಸಿನೆಮಾಸ್, ಕಾರ್ಕಳದಲ್ಲಿ ರಾದಿಕಾ, ಪ್ಲಾನೆಟ್, ಬೆಳ್ತಂಗಡಿಯಲ್ಲಿ ಭಾರತ್, ಮೂಡುಬಿದಿರೆಯಲ್ಲಿ ಅಮರಶ್ರೀ, ಪುತ್ತೂರಿನಲ್ಲಿ ಅರುಣಾ, ಸುಳ್ಯದಲ್ಲಿ ಸಂತೋಷ್, ಸುರತ್ಕಲ್‌ನಲ್ಲಿ ನಟರಾಜ್ ಹಾಗೂ ಉಡುಪಿಯಲ್ಲಿ ತೆರೆ ಕಾಣಲಿದೆ ಎಂದರು.
ಅರ್ಜುನ ವೆಡ್ಸ್ ಅಮೃತ ಚಿತ್ರದಲ್ಲಿ ತುಳು ರಂಗಭೂಮಿಯ ಖ್ಯಾತ ಕಲಾವಿದರು ಅಭಿನಯಿಸಿದ್ದು, ಜೊತೆಗೆ ಹೊಸಬರಿಗೂ ಅವಕಾಶ ನೀಡಲಾಗಿದೆ. ಮುಖ್ಯವಾಗಿ ಕುಸೇಲ್ದರಸೆ ನವೀನ್‌ಡಿ ಪಡೀಲ್‌ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಾಯಕನಟನಾಗಿ ಅನೂಪ್ ಾಗರ್ ಮತ್ತು ನಾಯಕಿಯಾಗಿ ಆರಾಧ್ಯ ಶೆಟ್ಟಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದರು.
ಈ ಚಿತ್ರಕ್ಕೆ ಸುಮಾ ಎಲ್.ಎನ್. ಶಾಸ್ತ್ರಿ ಸಂಗೀತ ನೀಡಿದ್ದಾರೆ. ರಾಜೇಶ್‌ಶೆಟ್ಟಿ, ದಾಮೋದರ ದೊಂಡೋಲೆ ಲೋಕುಕುಡ್ಲ ಸಾಹಿತ್ಯ ರಚಿಸಿದ್ದು, ಕಿರಣ್ ತರುಣ್‌ರಾಜ್ ಕೊರಿಯೋಗ್ರಾಫರ್ ಆಗಿ, ರಾಜೇಶ್ ಕೃಷ್ಣನ್, ಹೇಮಂತ್, ಎಲ್.ಎನ್. ಶಾಸ್ತ್ರಿ ಸುಪ್ರಿಯಾ ಮತ್ತು ಸುಮಾ ಎಲ್.ಎನ್. ಶಾಸ್ತ್ರಿ ಸ್ವರ ನೀಡಿದ್ದಾರೆ. ಕಲಾ ನಿರ್ದೇಶಕರಾಗಿ ಚೇತನ್ ಮುಂಡಾಡಿ, ಛಾಯಾಗ್ರಾಹಕರಾಗಿ ಆನಂದ ಸುಂದರೇಶ್, ಸಹ ನಿರ್ದೇಶಕರಾಗಿ ತ್ರಿಶೂಲ್ ಶೆಟ್ಟಿ, ರಾಮ್‌ದಾಸ್ ಸಸಿತ್ಲು ಕಾರ್ಯನಿರ್ವಹಿಸಿದ್ದಾರೆ ಎಂದರು.
ಉಳಿದಂತೆ ಅರವಿಂದ ಬೋಳಾರ್, ಭೋಜರಾಜ ವಾಮಂಜೂರು, ಉಮೇಶ್ ಮಿಜಾರ್, ಸಂದೀಪ್ ಶೆಟ್ಟಿ, ಪ್ರಸನ್ನ ಶೆಟ್ಟಿ, ರಮೇಶ್ ರೈ ಕುಕ್ಕುವಳ್ಳಿ, ಸುನೀಲ್ ನೆಲ್ಲಿಗುಡ್ಡೆ, ಸುಧೀರ್ ರಾಜ್ ಉರ್ವ, ಸತೀಶ್ ಬಂದಲೆ, ಪವಿತಾ ಶೆಟ್ಟಿ ಕಟಪಾಡಿ, ಹರಿಣಿ ಕಾರ್ಕಳ ಆರ್.ಜೆ. ಅನುರಾಗ್, ಪ್ರಜ್ವಲ್ ಪಾಂಡೇಶ್ವರ್ ತಾರಾಂಗಣದಲ್ಲಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಕುಸೇಲ್ದರಸೆ ನವೀನ್ ಡಿ. ಪಡೀಲ್, ಅನೂಪ್ ಸಾಗರ್, ಆರಾಧ್ಯ ಶೆಟ್ಟಿ ಉಪಸ್ಥಿತರಿದ್ದರು.







