ಲೋಕಾಯುಕ್ತರ ಭೇಟಿ
ಮಂಗಳೂರು, ಜು.18: ಮಂಗಳೂರು ಲೋಕಾಯುಕ್ತ ವಿಭಾಗದ ಪೊಲೀಸ್ ಅಧೀಕ್ಷಕರು, ಪೊಲೀಸ್ ಉಪಾಧೀಕ್ಷಕರು ಹಾಗೂ ಪೊಲೀಸ್ ನಿರೀಕ್ಷಕರು ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಕರ್ನಾಟಕ ಲೋಕಾಯುಕ್ತ ಕಾಯ್ದೆಯಡಿ ದೂರು ಅರ್ಜಿಯ ನಮೂನೆಗಳನ್ನು ವಿತರಿಸಲಿದೆ.
ಭರ್ತಿ ಮಾಡಿ, ನೋಟರಿಯಿಂದ ಅಫಿದಾವಿತ್ ಮಾಡಿಸಿದ ಈ ದೂರು ಅರ್ಜಿಗಳನ್ನು ಸ್ವೀಕರಿಸಲಾಗುವುದು. ಸರಕಾರಿ ಕಚೇರಿಗಳಲ್ಲಿ ಅಧಿಕೃತ ಕೆಲಸಗಳಲ್ಲಿ ವಿಳಂಬ ಹಾಗೂ ಇನ್ನಿತರೆ ತೊಂದರೆ ನೀಡುತ್ತಿರುವ ಸರಕಾರಿ ಅಧಿಕಾರಿ/ನೌಕರರ ವಿರುದ್ಧ ಸಾರ್ವಜನಿಕರು ದೂರುಗಳನ್ನು ನಿಗದಿತ ಪ್ರಪತ್ರದಲ್ಲಿ ನೀಡಬಹುದು.
ಜು.21ರಂದು ಪೂ.11ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಬೆಳ್ತಂಗಡಿ ತಾಲೂಕು ಕಚೇರಿ, ಅಪರಾಹ್ನ 3ರಿಂದ ಸಂಜೆ 4:30 ಗಂಟೆಯವರೆಗೆ ಸರಕಾರಿ ಅತಿಥಿ ಗೃಹ (ಐ.ಬಿ.) ಬಂಟ್ವಾಳ. ಜು. 25ರಂದು ಪೂ.11ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಮೂಡುಬಿದಿರೆ ವಿಶೇಷ ತಹಶೀಲ್ದಾರರ ಕಚೇರಿ, ಜು.27ರಂದು ಪೂ. 11ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಸುಳ್ಯ ತಾಲೂಕು ಕಚೇರಿ, ಜು.27ರಂದು ಅಪರಾಹ್ನ 3ರಿಂದ ಸಂಜೆ 4:30ಗಂಟೆಯವರೆಗೆ ಪುತ್ತೂರು ತಾಲೂಕು ಕಚೇರಿಯಲ್ಲಿ ಲಭ್ಯರಿರುತ್ತಾರೆ.
ಇದಲ್ಲದೆ ಉಳಿದ ದಿನಗಳಲ್ಲೂ ಕಚೇರಿ ವೇಳೆಯಲ್ಲೂ ಸಾರ್ವಜನಿಕರು ತಮ್ಮ ಅಹವಾಲು/ದೂರುಗಳನ್ನು ನೀಡಬಹುದು ಅಥವಾ ದೂರವಾಣಿ ಮೂಲಕವೂ ಸಂಪರ್ಕಿಸಬಹುದು. ಅನಾಮಧೇಯ ಅರ್ಜಿಗಳು ಬಂದಲ್ಲಿ ಯಾವುದೇ ಕ್ರಮ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಅರ್ಜಿದಾರರು ನಮೂನೆಯನ್ನು ಭರ್ತಿ ಮಾಡಿ ನಿಬಂಧಕರು, ಕರ್ನಾಟಕ ಲೋಕಾಯುಕ್ತ, ಬಹುಮಹಡಿಗಳ ಕಟ್ಟಡ, ಡಾ. ಬಿ.ಆರ್. ಅಂಬೇಡ್ಕರ್ ಬೀದಿ ಬೆಂಗಳೂರು-560001ಕ್ಕೆ ಕಳಹಿಸಬಹುದು. ಮಾಹಿತಿಗಾಗಿ ಪೊಲೀಸ್ ಅಧೀಕ್ಷಕರು (ದೂ.ಸಂ.: 9886542369/0824-2429197) ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.







