‘ಒವುಲ ಒಂತೆ ದಿನನೆ’ ನಾಟಕಕ್ಕೆ ಮುಹೂರ್ತ
ಮಂಗಳೂರು, ಜು.18: ಲಯನ್ ಕಿಶೋರ್ ಡಿ. ಶೆಟ್ಟಿ ನಿರ್ದೇಶನದ ಲಕುಮಿ ತಂಡದ ಕುಸಲ್ದ ಕಲಾವಿದರು ಅಭಿನಯಿಸುವ ನೂತನ ಕಲಾಕೃತಿ ‘ಒವುಲ ಒಂತೆ ದಿನನೆ’ ತುಳು ಹಾಸ್ಯ ನಾಟಕದ ಮುಹೂರ್ತ ಸಮಾರಂಭವು ಶರವು ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಜರಗಿತು.
ಶರವು ರಾಘವೇಂದ್ರ ಶಾಸ್ತ್ರಿ ಶುಭ ಹಾರೈಸಿದರು. ಕಲಾವಿದರಾದ ಸೀತಾರಾಮ ಕುಲಾಲ್, ವಿ.ಜಿ.ಪಾಲ್ ಶುಭ ಹಾರೈಸಿದರು. ನಿರ್ದೇಶಕ, ವ್ಯವಸ್ಥಾಪಕ ಕಿಶೋರ್ ಡಿ. ಶೆಟ್ಟಿ, ತುಳು ಅಕಾಡಮಿಯ ಮಾಜಿ ಸದಸ್ಯ ಮೋಹನ್ ಕೊಪ್ಪಲ, ಸುರೇಶ್ ಮಂಜೇಶ್ವರ್, ವಸಂತ ಅಮೀನ್, ದಿನೇಶ್ ಅತ್ತಾವರ, ಗಿರೀಶ್ ಶೆಟ್ಟಿ, ಶೋಭಾ ಶೆಟ್ಟಿ, ಅನಿಶಾ ಎಚ್.ಕೆ. ನಯನಾಡು,ರವಿ ಸುರತ್ಕಲ್ ಉಪಸ್ಥಿತರಿದ್ದರು.
ತುಳಸೀದಾಸ್ ಮಂಜೇಶ್ವರ್ ನಾಟಕ ರಚಿಸಿದ್ದು, ಗಣೇಶ್ ಕೊಡಕ್ಕಲ್ ಸಂಗೀತ ನೀಡಿದ್ದಾರೆ. ಮುಖ್ಯ ಪಾತ್ರದಲ್ಲಿ ಅರಂದ ಬೋಳಾರ್ ಅಭಿನಯಿಸುತ್ತಿದ್ದಾರೆ.
Next Story





