ಫಿಲಂ ಚೆಂಬರ್‌ಗೆ ತುರ್ತು ನೋಟಿಸ್ ಜಾರಿಗೊಳಿಸಿದ ಹೈಕೋರ್ಟ್
ಕರ್ನಾಟಕ ಫಿಲಂ ಚೆಂಬರ್‌ನ ಚುನಾವಣೆ ವಿಚಾರ

ಬೆಂಗಳೂರು, ಜು.18: ಅವಧಿ ಮುಗಿದರೂ ಕರ್ನಾಟಕ ಫಿಲಂ ಚೆಂಬರ್‌ನ ಚುನಾವಣೆಯನ್ನು ನಡೆಸಿಲ್ಲ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಫಿಲಂ ಚೆಂಬರ್‌ಗೆ ತುರ್ತು ನೋಟಿಸ್ ಜಾರಿಗೊಳಿಸಿದೆ.
ಈ ಸಂಬಂಧ ನಿರ್ಮಾಪಕರಾದ ಬಾ.ಮಾ.ಹರೀಶ್, ಬಸಂತ್‌ಕುಮಾರ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅಶೋಕ್ ಬಿ. ಹಿಂಚಿಗೇರಿ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿತು. ಅರ್ಜಿದಾರರ ಪರ ವಾದಿಸಿದ ವಕೀಲ ಎಸ್.ಪಿ.ಪ್ರಕಾಶ್ ಅವರು, ಕರ್ನಾಟಕ ಫಿಲಂ ಚೆಂಬರ್‌ನ ಅವಧಿ ಮುಗಿದಿದ್ದರೂ ಫಿಲಂ ಚೆಂಬರ್‌ನ ಚುನಾವಣೆಯನ್ನು ನಡೆಸುತ್ತಿಲ್ಲ ಎಂದು ಪೀಠಕ್ಕೆ ತಿಳಿಸಿದರು.
ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ನ್ಯಾಯಪೀಠವು ಫಿಲಂ ಚೆಂಬರ್‌ನ ಚುನಾವಣೆಯನ್ನು ಇನ್ನೂ ಯಾಕೆ ನಡೆಸಿಲ್ಲ ಎಂಬ ಬಗ್ಗೆ ಸ್ಪಷ್ಟನೆ ನೀಡಬೇಕೆಂದು ಆದೇಶಿಸಿತು.
ಅಲ್ಲದೆ, ಚುನಾವಣೆ ಬಗ್ಗೆ ಸ್ಪಷ್ಟನೆ ಕೇಳಿ ಜಿಲ್ಲಾ ನೋಂದಣಾಧಿಕಾರಿ, ಸಹಕಾರ ಇಲಾಖೆ ಕಾರ್ಯದರ್ಶಿ ಹಾಗೂ ಫಿಲಂ ಚೆಂಬರ್‌ಗೆ ತುರ್ತು ನೋಟಿಸ್ ಜಾರಿಗೊಳಿಸಿತು.
Next Story





