ಸಿ.ಎಸ್.ಪುಟ್ಟರಾಜು, ಕೆ.ಟಿ.ಶ್ರೀಕಂಠೇಗೌಡ, ಅಪ್ಪಾಜಿಗೌಡ ಬೆಂಬಲ
ದೇಶಹಳ್ಳಿ ಕೆರೆಯಲ್ಲಿ ಮುಂದುವರಿದ ಧರಣಿ

ಮದ್ದೂರು, ಜು.18: ಕಾವೇರಿ ಕೊಳ್ಳದ ನಾಲೆಗಳಿಗೆ ನೀರುಹರಿಸಲು ಒತ್ತಾಯಿಸಿ ತಾಲೂಕಿನ ದೇಶಹಳ್ಳಿ ಕೆರೆಯಲ್ಲಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆಂ ು ಕಾರ್ಯಕರ್ತರು ನಡೆಸುತ್ತಿರುವ ಧರಣಿ ಮುಂದುವರಿದಿದ್ದು, ಮಂಗಳವಾರ ಸಂಸದ ಸಿ.ಎಸ್.ಪುಟ್ಟರಾಜು , ಶಾಸಕರಾದ ಕೆ .ಟಿ.ಶ್ರೀಕಂಠೇಗೌಡ, ಎನ್.ಅಪ್ಪಾಜಿಗೌಡ ಸೇರಿದಂತೆ ಹಲವು ಸಂಘಟನೆಗಳ ಮುಖಂಡರು ಬೆಂಬಲ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಸದ ಪುಟ್ಟರಾಜು, ಸರಕಾರ ಮತ್ತು ಜಿಲ್ಲಾಡಳಿತ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಕೆಆರ್‌ಎಸ್‌ನಿಂದ ಕೂಡಲೇ ನಾಲೆಗಳಿಗೆ ನೀರುಹಿಸಬೇಕು ಎಂದು ಒತ್ತಾಯಿಸಿದರು.
ವಿಧಾನಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಮಾತನಾಡಿ, ಜಿಲ್ಲಾ ರೈತರ ಹಿತರಕ್ಷಣಾ ಸಮಿತಿ ಚಟುವಟಿಕೆಗಳು ಸ್ಥಗಿತಗೊಂಡಿವೆ. ಸಮಿತಿ ಅಧ್ಯಕ್ಷ ಜಿ.ಮಾದೇಗೌಡರು, ಸರ್ವಪಕ್ಷ, ಸಂಘಟನೆಗಳು ಸಭೆ ಕರೆದು ಹೋರಾಟದ ರೂಪುರೇಷೆ ಸಿದ್ದಪರಿಸಬೇಕೆಂದು ತಾಕೀತು ಮಾಡಿದರು.
ವೇದಿಕೆ ರಾಜ್ಯಾಧ್ಯಕ್ಷ ರಮೇಶ್‌ಗೌಡ, ಜಿಲ್ಲಾಧ್ಯಕ್ಷ ವಿ.ಸಿ.ಉಮಾಶಂಕರ್, ತಾಲೂಕು ಅಧ್ಯಕ್ಷ ರಾಜೇಶ್, ವಿ.ಎಚ್.ನರಸಿಂಹೇಗೌಡ, ಗುಂಡ ಮಹೇಶ್, ವಿನಯ್, ಕಿಟ್ಟಿ, ತಿಪ್ಪೂರು ರಾಜೇಶ್, ದಿನೇಶ್, ರಾಮಯ್ಯ, ಮಲ್ಲರಾಜು, ಜಯರಾಂ ಇತರರು ಧರಣಿಯಲ್ಲಿ ಭಾಗವಹಿಸಿದ್ದರು.







