ಉಕ್ರೇನ್ ಬಂಡುಕೋರರಿಂದ ಹೊಸ ದೇಶ ಘೋಷಣೆ

ಮಾಸ್ಕೊ, ಜು. 18: ಪೂರ್ವ ಉಕ್ರೇನ್ ನಲ್ಲಿರುವ ಪ್ರತ್ಯೇಕತಾವಾದಿಗಳು ಮಂಗಳವಾರ ನೂತನ ಪ್ರತ್ಯೇಕ ದೇಶವೊಂದನ್ನು ಘೋಷಿಸಿದ್ದಾರೆ. ಈ ನೂತನ ರಾಜ್ಯದಲ್ಲಿ ಅವರ ನಿಯಂತ್ರಣದ ಪ್ರದೇಶಗಳ ಜೊತೆಗೆ ಇಡೀ ಉಕ್ರೇನ್ ಸೇರಿದೆ.
ಈ ಅಚ್ಚರಿಯ ಘೋಷಣೆಯ ಹಿನ್ನೆಲೆಯಲ್ಲಿ, 2015ರಲ್ಲಿ ಜಾರಿಗೆ ಬಂದ ಯುದ್ಧವಿರಾಮ ಮುಂದುವರಿಯುವ ಬಗ್ಗೆ ಸಂದೇಹಗಳು ತಲೆದೋರಿವೆ.
ಈ ಯುದ್ಧವಿರಾಮದ ಪ್ರಕಾರ, ಉಕ್ರೇನ್ ನ ಕೈಗಾರಿಕಾ ಪ್ರದೇಶದಲ್ಲಿ ಸಂಘರ್ಷ ಕೊನೆಗೊಂಡು ಆ ಪ್ರದೇಶಗಳು ವಾಪಸ್ ಉಕ್ರೇನ್ ನ ತೆಕ್ಕೆಗೆ ಹೋಗಬೇಕಾಗಿತ್ತು ಹಾಗೂ ಅದಕ್ಕೆ ಪ್ರತಿಯಾಗಿ ಆ ಪ್ರದೇಶಕ್ಕೆ ಹೆಚ್ಚಿನ ಸ್ವಾಯತ್ತೆ ಲಭಿಸಬೇಕಾಗಿತ್ತು.
ಪೂರ್ವ ಉಕ್ರೇನ್ ನ ಹಲವು ಭಾಗಗಳ ನಿಯಂತ್ರಣವನ್ನು ರಶ್ಯ ಬೆಂಬಲಿತ ಬಂಡುಕೋರರು 2014 ಎಪ್ರಿಲ್‌ನಲ್ಲಿ ಪಡೆದ ಬಳಿಕ ನಡೆದ ಕಾಳಗದಲ್ಲಿ 10,000ಕ್ಕೂ ಅಧಿಕ ಮಂದಿ ಇಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.
ಅದಕ್ಕೂ ಮೊದಲು ಉಕ್ರೇನ್ ನ ರಾಜ್ಯ ಕ್ರೈಮಿಯವನ್ನು ರಶ್ಯ ತನ್ನ ಭೂಭಾಗಕ್ಕೆ ಸೇರಿಸಿಕೊಂಡಿತ್ತು.
Next Story





