ಸ್ಟೆಪ್ಸ್ ಸಂಸ್ಥೆಯಿಂದ ಸ್ಕಾಲರ್‌ಶಿಪ್, ಮೌಲ್ಯ ಮಾಪನ ಪರೀಕ್ಷೆ
ಬೆಂಗಳೂರು, ಜು.19: ಶೈಕ್ಷಣಿಕಾ ಮಟ್ಟ ಹೆಚ್ಚಿಸುವ ಹಾಗೂ ಮೌಲ್ಯ ಮಾಪನ ಕಲಿಕಾ ಶಿಕ್ಷಣ ನೀಡುವ ಸಲುವಾಗಿ ಸ್ಟೆಪ್ಸ್ ಸಂಸ್ಥೆ ವತಿಯಿಂದ ಸ್ಟೆಪ್ಸ್ ಸ್ಕಾಲರ್‌ಶಿಪ್ ಪರೀಕ್ಷೆ ಹಾಗೂ ಅಧ್ಯಯನಗಳ ವೌಲ್ಯಮಾಪನ ಪರೀಕ್ಷೆಗಳನ್ನು ಹಮ್ಮಿಕೊಂಡಿದೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಶ್ರೀಪಾಲ್ ಜೈನ್, ಇತ್ತೀಚಿಗೆ ಶಿಕ್ಷಣ ಕ್ಷೇತ್ರದಲ್ಲಿ ಹಲವು ಕುತೂಹಲಕಾರಿ ಬೆಳವಣಿಗೆಗಳು ಕಾಣುತ್ತಿವೆ. ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಯಶಸ್ಸು ಸಾಧಿಸಲು ಅಗತ್ಯವಾದ ಹೊಸ ಮಾರ್ಗಗಳನ್ನು ಕಂಡು ಹಿಡಿಯುವತ್ತ ಪೋಷಕರು, ಶಿಕ್ಷಕರು ಮುಂದಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಕಲಿಕಾ ವ್ಯವಸ್ಥೆಯನ್ನು ಸುಧಾರಿಸುವ ಸಲುವಾಗಿ ಈ ಪರೀಕ್ಷೆಗಳು ಸಹಕಾರಿಯಾಗಲಿವೆ ಎಂದು ಹೇಳಿದರು.
ಪ್ರಥಮ ಬಾರಿಗೆ ಕರ್ನಾಟಕದಲ್ಲಿ ಈ ಪರೀಕ್ಷೆ ನಡೆಯುತ್ತಿದೆ. ಎರಡು ಹಂತದಲ್ಲಿ ಪರೀಕ್ಷೆಗಳು ನಡೆಯಲಿದ್ದು, ಮೊದಲನೆ ಹಂತದಲ್ಲಿ ಪ್ರೌಢ ಶಾಲೆ ಹಾಗೂ ಪಿಯುಸಿ ಓದುತ್ತಿರುವ 1 ಲಕ್ಷ ವಿದ್ಯಾರ್ಥಿಗಳು ಶಿಷ್ಯವೇತನ ಪರೀಕ್ಷೆ ಬರೆಯುತ್ತಾರೆ. ಎರಡನೆ ಹಂತದ ಭಾಗವಾಗಿ ಸೆ.10 ರಂದು ರಾಜ್ಯಾದ್ಯಂತ ಇರುವ ಪರೀಕ್ಷಾ ಕೇಂದ್ರಗಳಲ್ಲಿ 20 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು.
www.allindiasteps.com ವಿದ್ಯಾರ್ಥಿಗಳನ್ನು ಮುಖಾಮುಖಿ ಕೌನ್ಸೆಲಿಂಗ್ ಮಾಡುವ ಪರಿಣಿತರ ತಂಡಗಳು ಸೂಕ್ತವಾದ ಮಾರ್ಗದರ್ಶನ ನೀಡಲಿದ್ದಾರೆ. ಈ ಮಾರ್ಗದರ್ಶನದ ಆಧಾರದಲ್ಲಿ ವಿದ್ಯಾರ್ಥಿಗಳು ವೃತ್ತಿ ಆಯ್ಕೆ ಬಗ್ಗೆ ನಿರ್ಧಾರ ಕೈಗೊಳ್ಳಬಹುದಾಗಿದೆ. ಈ ಪರೀಕ್ಷೆಯ ವಿವಿಧ ವರ್ಗಗಳಲ್ಲಿ ಸ್ಪೆಟ್ಸ್ ಟಾಪರ್‌ಗೆ 25 ಸಾವಿರ ನಗದು ಬಹುಮಾನ ಸೇರಿದಂತೆ ರ್ಯಾಂಕಿಂಗ್, ಪ್ರಮಾಣ ಪತ್ರ ವಿತರಣೆ, ಸನ್ಮಾನದಂತ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ವಿದ್ಯಾರ್ಥಿಗಳು ವೆಬ್‌ಸೈಟ್‌ಗೆ ಭೇಟಿ ನೀಡಬಹುದು ಎಂದು ತಿಳಿಸಿದರು.







