ಹನೂರು: ನಮ್ಮಗ್ರಾಮ ನಮ್ಮಹೂಣೆ ಕಾರ್ಯಕ್ರಮ

ಹನೂರು, ಜು.19: 6 ರಿಂದ 14 ವರ್ಷದ ಮಕ್ಕಳಿಗ್ಗೆ ಕಡ್ಡಾಯವಾಗಿ ಪೋಷಕರು ಗುಣಮಟ್ಡದ ಶಿಕ್ಷಣ ಕೊಡುವ ಜವಬ್ದಾರಿ ಪೋಷಕರದ್ದಾಗಿರುತ್ತದೆ ಇಲ್ಲವಾದ್ದಲ್ಲಿ ಕಾನೂನು ರೀತಿಯ ಕ್ರಮ ಜರುಗಿಸಬೇಕಾಗತ್ತದೆ ಎಂದು ಮಹದೇಶ್ವರ ಬೆಟ್ಟದ ಪೊಲೀಸ್ ನೀರಿಕ್ಷಕರಾದ ಷಣ್ಮುಗ ವರ್ಮ ತಿಳಿಸಿದರು.
ತುಳಸಿಕೆರೆಯಲ್ಲಿ ಆಯೋಜಿಸಿದ್ದ ನಮ್ಮಗ್ರಾಮ ನಮ್ಮಹೂಣೆ ಗ್ರಾಮಸಭೆಯಲ್ಲಿ ಮಾತನಾಡಿದ ಅವರು, ಗ್ರಾಮದ ಜನರಿಗೆ ಕಾನೂನಿನ ಅರಿವು ಮೂಡಿಸಿದರು. ಸಾರ್ವಜನಿಕ ಆಸ್ತಿಯನ್ನ ಕಾಪಾಡುವಂತಹ ಜವಬ್ದಾರಿ ಕೇವಲ ಸರಕಾರದ್ದು ಮಾತ್ರವಲ್ಲ. ಪ್ರತಿಯೊಬ್ಬ ನಾಗರೀಕನ ಆದ್ಯ ಕರ್ತವ್ಯವಾಗಿದೆ. ಹಾಗೂ, ದ್ವಿಚಕ್ರ ಸವಾರರು ಕಡ್ಡಾಯವಾಗಿ ಜೀವರಕ್ಷಕವಾದ ಹೆಲ್ಮೆಟ್ ಧರಿಸಬೇಕು ಮತ್ತು ಸಂಚಾರಿ ನಿಯಮಗಳನ್ನು ತಪ್ಪದೇ ಪಾಲೀಸಬೇಕು ಎಂದು ಸಾರ್ವಜನಿಕರಲ್ಲಿ ಹೇಳಿದರು.
ಸಾಮಾಜಿಕ ಪಿಡುಗುಗಳಾದ ಬಾಲ್ಯವಿವಾಹ, ವರದಕ್ಷಣೆ ಕಿರುಕುಳ, ಹೆಣ್ಣು ಮಕ್ಕಳಿಗೆ ಅನ್ಯಾಯ ಮುಂತಾದವು ಆಗುತ್ತಿರುವುದನ್ನು ಕಂಡು ಬಂದಲ್ಲಿ ಕೋಡಲೇ ಇಲಾಖೆಯ ಗಮನಕ್ಕೆ ತರಬೇಕು. ನಮ್ಮಗಮನಕ್ಕೆತಿಳಿಸಿದವರ ಹೆಸರನ್ನು ಗೌಪ್ಯವಾಗಿ ಇಡಲಾಗುವುದು ಎಂದು ತಿಳಿಸಿದರು.
ನಂತರ ಮಾತನಾಡಿದ ಗ್ರಾಮಸ್ಥರು, ನಮ್ಮ ಗ್ರಾಮಕ್ಕೆ ಸರಿಯಾದ ರಸ್ತೆ ಸೌಲಭ್ಯವಿಲ್ಲ. ತುರ್ತು ಸಂಧರ್ಭಗಳಲ್ಲಿ ತೆರಳಲು ತುಂಬಾ ತೊಂದರೆಯಾಗುತ್ತದೆ. ಅಲ್ಲದೆ, ನಮ್ಮ ಗ್ರಾಮದಲ್ಲಿ ವಿದ್ಯುತ್ ನ ಸಮಸ್ಯಯೂ ಇದೆ ಎಂದು ಅಧಿಕಾರಿಗಳಲ್ಲಿ ತಮ್ಮ ಅಳಲನ್ನು ತೋಡಿಕೊಂಡರು. ಈ ಸಂಧರ್ಭದಲ್ಲಿ ಎಎಸ್ಐ ರಾಜೇಂದ್ರ ಮೋಹನ್ ಸೇರಿದಂತೆ ಗ್ರಾಮದ ಹಿರಿಯರು ಇದ್ದರು.







