ಜಾನುವಾರು ಕಳವು
ಉಳ್ಳಾಲ, ಜು. 19: ಉಳ್ಳಾಲ ಠಾಣಾ ವ್ಯಾಪ್ತಿಯ ಕುಂಪಲ ಎಂಬಲ್ಲಿ ಮೇಯಲು ಬಿಟ್ಟಿದ್ದ ಮೂರು ಹಸುಗಳು ಕಳವಾದ ಘಟನೆ ನಡೆದಿದೆ.
ಕುಂಪಲ ಮೂರುಕಟ್ಟೆ ನಿವಾಸಿ ಸುಚಿವೃತ ಶೆಟ್ಟಿ ಅವರ ಹಸುಗಳು ಕಳ್ಳತನವಾಗಿದ್ದು, ಸೋಮವಾರ ತಾನು ಸಾಕಿದ ಜಾನುವಾರುಗಳನ್ನು ಶೆಟ್ಟರು ಮೇಯಲು ಬಿಟ್ಟಿದ್ದರು. ಕುಂಪಲ ಶಾಲಾ ಬಳಿಯ ನಿವಾಸಿಯೋರ್ವರು ಮಂಗಳವಾರ ಮುಂಜಾನೆ ನಸುಕಿನ ವೇಳೆ ಕಾರಿನಲ್ಲಿ ಹಸುಗಳನ್ನು ಕದ್ದೊಯ್ಯುತ್ತಿದ್ದುದನ್ನು ಕಂಡಿರುವುದಾಗಿ ಸುಚಿವೃತರಲ್ಲಿ ಹೇಳಿದ್ದಾರೆ. ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Next Story





