ಲಾರಿ ಪಲ್ಟಿ: ಓರ್ವ ಮೃತ್ಯು, ಹಲವರಿಗೆ ಗಾಯ
ಬೆಳ್ತಂಗಡಿ, ಜು.19: ತಣ್ಣೀರು ಪಂತ ಸಮೀಪ ದೇವಸ್ಥಾನಕ್ಕೆ ಸಾಮಗ್ರಿ ಸಾಗಾಟ ಮಾಡುತ್ತಿದ್ದ ಲಾರಿ, ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದು ಲಾರಿಯಲ್ಲಿದ್ದ ವ್ಯಕ್ತಿಯೋರ್ವ ಮೃತ ಪಟ್ಟ ಘಟನೆ ಬುಧವಾರ ಸಂಜೆ ಸಂಭವಿಸಿದೆ.
ಪುತ್ತಿಲ ಗ್ರಾಮದ ಎಲಕ್ಕೆ ನಿವಾಸಿ ಜಯರಾಮ (45) ಮೃತರು ಎಂದು ಗುರುತಿಸಲಾಗಿದೆ. ಲಾರಿಯಲ್ಲಿದ್ದ ರಂಜಿತ್, ಕರುಣಾಕರ, ಅಶೋಕ, ಪ್ರವೀಣ ಎಂಬವರೂ ಗಾಯಗೊಂಡಿದ್ದಾರೆ.
ಗಂಭೀರವಾಗಿ ಗಾಯಗೊಂಡ ಜಯರಾಮ ಅವರನ್ನು ಪುತ್ತೂರಿನ ಆಸ್ಪತ್ರೆಗೆ ಸಾಗಿಸಿದರೂ ಆ ವೇಳೆಗೆ ಅವರು ಮೃತಪಟ್ಟಿದ್ದರು ಎಂದು ತಿಳಿದುಬಂದಿದೆ.
ದೇವಸ್ಥಾನಕ್ಕೆ ಹೋಗುವ ರಸ್ತೆ ಮಣ್ಣಿನ ರಸ್ತೆಯಾಗಿದ್ದು ಮಳೆಗೆ ಅಲ್ಲಲ್ಲಿ ಕುಸಿದಿತ್ತು ಭಾರ ಹೊತ್ತ ಲಾರಿ ಮಣ್ಣಿನ ರಸ್ತೆಯಲ್ಲಿ ಜಾರಿ ಮಗುಚಿ ಬಿದ್ದಿದೆ. ಪೂಂಜಾಲಕಟ್ಟೆ ಪೋಲೀಸರು ಘಟನಾ ಸ್ಥಳಕ್ಕೆ ತೆರಳಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story





