ಕಪ್ಪು ನಾಗರ ಹಾವು ಸೆರೆ

ಬಣಕಲ್, ಜು.19: ಕೊಟ್ಟಿಗೆಹಾರದ ಸಮೀಪ ಅತ್ತಿಗೆರೆ ಗ್ರಾಮದಲ್ಲಿ ಎ.ಎನ್.ಪವಿನ್‌ಗೌಡ ಅವರ ಕಾಫೀ ತೋಟದಲ್ಲಿ 6 ಅಡಿ ಉದ್ದದ ನಾಗರಹಾವನ್ನು ಸೆರೆ ಹಿಡಿಯಲಾಯಿತು.
ಕಾಫಿ ತೋಟದಲ್ಲಿ ಭಾರೀ ಮಳೆ ಸುರಿಯುತ್ತಿದ್ದರೂ ಕೆಲಸ ಮಾಡುವ ಸಮಯದಲ್ಲಿ ರೈತರಾದ ಪವನ್‌ಗೌಡ ಅವರ ಕಣ್ಣಿಗೆ ಕಪ್ಪು ನಾಗರಹಾವು ಕಾಣಿಸಿಕೊಂಡಿತು.ಕೂಡಲೇ ಉರಗತಜ್ಞ ಆರೀಫ್ ಬಣಕಲ್ ಅವರನ್ನು ಕರೆಸಿ ನಾಗರಹಾವನ್ನು ಹಿಡಿದು ಚಾರ್ಮಾಡಿ ಘಾಟ್‌ನ ಅರಣ್ಯದಲ್ಲಿ ಸುರಕ್ಷಿತವಾಗಿ ಬಿಡಲಾಯಿತು.
Next Story





