ಮಸಾಜ್ ಪಾರ್ಲರ್‌ಗೆ ದಾಳಿ
ಮಂಗಳೂರು, ಜು.19: ನಗರದ ಬಿಜೈ ಬಳಿಯ ಮುದ್ರಾ ಮಸಾಜ್ ಪಾರ್ಲರ್‌ಗೆ ಬರ್ಕೆ ಪೊಲೀಸರು ಬುಧವಾರ ದಾಳಿ ಮಾಡಿ ಮೂವರು ಯುವಕರನ್ನು ಬಂಧಿಸಿದ್ದಾರೆ.
ಆಟೊ ಚಾಲಕ ಅನ್ಸಾರ್, ಕೇರಳ ನಿವಾಸಿಗಳಾದ ಅಬ್ದುಲ್ ರಸೂಲ್, ವರುಣ್ ಬಂಧಿತ ಆರೋಪಿಗಳು. ಸಂಸ್ಥೆಯ ಮಾಲಕ ಸತೀಶ್ ತಲೆ ಮರೆಸಿಕೊಂಡಿದ್ದಾನೆ ಎಂದು ಪ್ರಕರಣ ದಾಖಲಿಸಿರುವ ಪೊಲೀಸರು ತಿಳಿಸಿದ್ದಾರೆ.
ನಗರದ ಮಸಾಜ್ ಪಾರ್ಲರ್‌ಗಳಲ್ಲಿ ಅನೈತಿಕ ದಂಧೆ ನಡೆಯುತ್ತಿರುವ ಬಗ್ಗೆ ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಮೇಯರ್ ಕೆಲವು ಮಸಾಜ್ ಪಾರ್ಲರ್‌ಗಳಿಗೆ ದಾಳಿ ನಡೆಸಿ ಗಮನ ಸೆಳೆದಿದ್ದರು. ಇದೀಗ ಎಚ್ಚೆತ್ತುಕೊಂಡ ಪೊಲೀಸರೂ ಕೂಡ ದಾಳಿ ನಡೆಸಿದ್ದು, ಬುಧವಾರ ಮುದ್ರಾ ಮಸಾಜ್ ಪಾರ್ಲರ್‌ನಿಂದ ಇಬ್ಬರು ಮಹಿಳೆಯರನ್ನು ರಕ್ಷಿಸಿದ್ದಾರೆ ಎಂದು ತಿಳಿದು ಬಂದಿದೆ.
Next Story





