ಫ್ರಾನ್ಸ್: ಸೇನಾ ಅನುದಾನ ಕಡಿತ; ಮುಖ್ಯಸ್ಥ ರಾಜೀನಾಮೆ

ಪ್ಯಾರಿಸ್, ಜು. 19: ಸೇನಾ ಅನುದಾನ ಕಡಿತಕ್ಕೆ ಸಂಬಂಧಿಸಿ ಅಧ್ಯಕ್ಷ ಇಮಾನುಯೆಲ್ ಮ್ಯಾಕ್ರೋನ್ ಜೊತೆ ಭಿನ್ನಾಭಿಪ್ರಾಯ ಏರ್ಪಟ್ಟ ಹಿನ್ನೆಲೆಯಲ್ಲಿ, ಫ್ರಾನ್ಸ್ ಸೇನಾ ಮುಖ್ಯಸ್ಥ ಜನರಲ್ ಪಿಯರ್ ಡಿ ವಿಲಿಯರ್ಸ್ ಬುಧವಾರ ರಾಜೀನಾಮೆ ನೀಡಿದ್ದಾರೆ.
ಬುಧವಾರ ನಡೆದ ಭದ್ರತಾ ಸಮಿತಿ ಸಭೆಯೊಂದರಲ್ಲಿ ಸೇನಾ ಮುಖ್ಯಸ್ಥರು ಮ್ಯಾಕ್ರೋನ್‌ಗೆ ರಾಜೀನಾಮೆ ಸಲ್ಲಿಸಿದರು ಹಾಗೂ ಅದನ್ನು ಅಧ್ಯಕ್ಷರು ಅಂಗೀಕರಿಸಿದರು ಎಂದು ಸೇನಾಧಿಕಾರಿಯ ಕಚೇರಿ ತಿಳಿಸಿದೆ.
ಕಳೆದ ವಾರ ನಡೆದ ಸಂಸದೀಯ ಆಯೋಗದ ಗುಪ್ತ ಸಭೆಯಲ್ಲಿ ನೂತನ ಸೇನಾ ಕಡಿತಗಳ ಬಗ್ಗೆ ಡಿ ವಿಲಿಯರ್ಸ್ ಆಕ್ಷೇಪ ವ್ಯಕ್ತಪಡಿಸಿದ್ದರು ಎನ್ನಲಾಗಿದೆ.
Next Story





