ಎಡ ಕಿಡ್ನಿ ಬದಲು ಬಲ ಕಿಡ್ನಿ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯ !

ರಾಂಚಿ, ಜು. 19: ರಾಂಚಿಯ ಪ್ರತಿಷ್ಠಿತ ಮೆಡಿಕಲ್ ಆಸ್ಪತ್ರೆಯೊಂದರಲ್ಲಿ ವೈದ್ಯರು ಎಡ ಕಿಡ್ನಿ ಬದಲು ಬಲ ಕಿಡ್ನಿ ಶಸ್ತ್ರಚಿಕಿತ್ಸೆ ನಡೆಸಿದ ಘಟನೆ ನಡೆದಿದೆ.
ಕಿಡ್ನಿಯಲ್ಲಿ ಕಲ್ಲು ಪತ್ತೆಯಾದ ಹಿನ್ನೆಲೆಯಲ್ಲಿ ರಾಜೇಂದ್ರ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸಯನ್ಸ್‌ನಲ್ಲಿ ಗುಡಿಯಾ ಬಾಯಿಗೆ ಎಡ ಕಿಡ್ನಿಗೆ ಬದಲಾಗಿ ಬಲ ಕಿಡ್ನಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ ಎಂದು ಪತಿ ಪ್ರದೀಪ್ ಕುಮಾರ್ ಬುಧವಾರ ತಿಳಿಸಿದ್ದಾರೆ.
ವೈದ್ಯರು ಗುಡಿಯಾ ಬಾಯಿಗೆ ಕಿಡ್ನಿಯಲ್ಲಿ ಕಲ್ಲು ಇರುವುದನ್ನು ವೈದ್ಯರು ಪತ್ತೆ ಮಾಡಿದ್ದರು. ಖಾಸಗಿ ಆಸ್ಪತ್ರೆಯೊಂದು ಶಸ್ತ್ರಚಿಕಿತ್ಸೆಗೆ 40 ಸಾವಿರ ರೂಪಾಯಿ ನೀಡಬೇಕು ಎಂದು ಹೇಳಿತ್ತು. ನಾನು ಚಾಲಕ. ನನಗೆ ಅಷ್ಟೊಂದು ಹಣ ಕೊಡಲು ಸಾಧ್ಯವಿಲ್ಲ. ಆದುದರಿಂದ ಪತ್ನಿಯನ್ನು ರಾಜೇಂದ್ರ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸಯನ್ಸ್‌ಗೆ ದಾಖಲಿಸಿದೆ. ಶಸ್ತ್ರಚಿಕಿತ್ಸೆ ಬಳಿಕ ಆಕೆಯ ಬಲಬದಿಗೆ ಬದಲಾಗಿ ಎಡ ಬದಿಗೆ ಹೊಲಿಗೆ ಹಾಕಿರುವುದನ್ನು ನೋಡಿದೆ. ಇದನ್ನು ನಾನು ವೈದ್ಯರ ಗಮನಕ್ಕೆ ತಂದೆ. ಮುಂದಿನ ಚಿಕಿತ್ಸೆ ನೀಡಲಾಗುವುದು ಎಂದು ಅವರು ಭರವಸೆ ನೀಡಿದರು. ಆದರೆ, ಇದುವರೆಗೆ ಯಾವುದೇ ಚಿಕಿತ್ಸೆ ನೀಡಿಲ್ಲ ಎಂದು ಅವರು ಹೇಳಿದ್ದಾರೆ.
ತೀವ್ರ ನೋವಿನ ಹಿನ್ನೆಲೆಯಲ್ಲಿ ಗುಲಾಬಿ ಬಾಯಿ ಅವರನ್ನು ಶನಿವಾರ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಈ ಎಡವಟ್ಟಿಗೆ ಯೂರಾಲಜಿ ವಿಭಾಗದ ಮುಖ್ಯಸ್ಥರು ಕಿರಿಯ ವೈದ್ಯರನ್ನು ದೂರಿದ್ದಾರೆ. ಗುಡಿಯಾ ಬಾಯಿಯ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯನನ್ನು ಪ್ರದೀಪ್ ಭೇಟಿಯಾಗಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವುದಾಗಿ ಅವರು ಪ್ರದೀಪ್ ಕುಮಾರ್‌ಗೆ ಭರವಸೆ ನೀಡಿದ್ದರು. ಆದರೆ, ಅನಂತರ ಅವರು ಆಸ್ಪತ್ರೆಯನ್ನೇ ತ್ಯಜಿಸಿ ಹೋಗಿದ್ದಾರೆ.





