ಇಪಿಡಬ್ಲ್ಯೂ ಸಂಪಾದಕ ರಾಜೀನಾಮೆ

ಮುಂಬೈ, ಜು. 19: ಇಕಾನಮಿಕ್ ಆ್ಯಂಡ್ ಪೊಲೀಟಿಕಲ್ ವೀಕ್ಲಿಯ ಸಂಪಾದಕ ಪರಂಜೋಯ್ ಗುಹಾ ಥಾಕುರ್ಟಾ ಮಂಗಳವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. 50 ವರ್ಷ ಹಳೆಯ ನಿಯತಕಾಲಿಕದ ವಿರುದ್ಧ ಅದಾನಿ ಗುಂಪು ಮಾನನಷ್ಟ ನೋಟಿಸ್ ಜಾರಿ ಮಾಡಿದ ಹಿನ್ನೆಲೆಯಲ್ಲಿ ಅವರು ಈ ನಿರ್ಧಾರ ಕೈಗೊಂಡಿದ್ದಾರೆ.
ಕೇಂದ್ರ ಸರಕಾರ ಅದಾನಿ ಗುಂಪಿಗೆ ಅನುಕೂಲವಾಗುವಂತೆ ವಿಶೇಷ ವಿತ್ತ ವಲಯದ ನಿಯಮ ಬದಲಾಯಿಸಿತ್ತು. ಇದರಿಂದ ಅದಾನಿ ಗುಂಪು 500 ಕೋಟಿ ರೂಪಾಯಿ ತೆರಿಗೆಯಿಂದ ಮರುಪಾವತಿ ಗಳಿಸಿತು ಎಂದು ಇಪಿಡಬ್ಲುವಿನಲ್ಲಿ ಲೇಖನ ಪ್ರಕಟಿಸಲಾಗಿತ್ತು.
ರಾಜೀನಾಮೆ ನೀಡಿರುವುದನ್ನು ಒಪ್ಪಿಕೊಂಡಿರುವ ಗುಹಾ, ಮಾನನಷ್ಟ ನೋಟಿಸ್‌ನ ಹಿನ್ನೆಲೆಯಲ್ಲಿ ಸಂಸ್ಥೆಯ ಟ್ರಸ್ಟಿಗಳ ಮಂಡಳಿಯೊಂದಿಗೆ ಉಂಟಾದ ಭಿನ್ನಾಭಿಪ್ರಾಯದಿಂದ ನಾನು ರಾಜೀನಾಮೆ ನೀಡಿರುವುದಲ್ಲ. ನಾನು ಹೆಚ್ಚಿನ ಸಮಯವನ್ನು ದಿಲ್ಲಿಯಲ್ಲಿ ನನ್ನ ಕುಟುಂಬದೊಂದಿಗೆ ಕಳೆಯಲು ಬಯಸಿದ್ದೇನೆ ಎಂದಿದ್ದಾರೆ.
Next Story





