2017ರ ಮೊದಲಾರ್ಧ 2ನೆ ಅತ್ಯಂತ ಬಿಸಿ ಅವಧಿ

ವಾಶಿಂಗ್ಟನ್, ಜು. 19: ಈ ವರ್ಷದ ಮೊದಲಾರ್ಧವು 137 ವರ್ಷಗಳ ಆಧುನಿಕ ದಾಖಲೆ ನಿರ್ವಹಣೆಯ ಅವಧಿಯಲ್ಲೇ ಎರಡನೆ ಅತ್ಯಂತ ಬಿಸಿ ಅವಧಿಯಾಗಿದೆ ಎಂದು ವಿಜ್ಞಾನಿಗಳು ಬುಧವಾರ ಹೇಳಿದ್ದಾರೆ.
ಮೊದಲ ಸ್ಥಾನದಲ್ಲಿ 2016 ಇದೆ. ಈ ಅವಧಿಯ ಜಾಗತಿಕ ಭೂ ಮತ್ತು ಸಾಗರ ಮೇಲ್ಮೈಗಳ ಸರಾಸರಿ ಉಷ್ಣಾಂಶವು 20ನೆ ಶತಮಾನದ ಸರಾಸರಿಯಾಗಿರುವ 13.5 ಡಿಗ್ರಿ ಸೆಲ್ಸಿಯಸ್‌ಗಿಂತ 0.91 ಡಿಗ್ರಿಯಷ್ಟು ಹೆಚ್ಚಾಗಿದೆ.
ಕಳೆದ ತಿಂಗಳು ಮೂರನೆ ಅತ್ಯಂತ ಬಿಸಿಯ ಜೂನ್ ತಿಂಗಳಾಗಿದೆ ಎಂದು ಅಮೆರಿಕ ರಾಷ್ಟ್ರೀಯ ಸಾಗರ ಮತ್ತು ವಾತಾವರಣ ನಿರ್ವಹಣೆ (ಎನ್‌ಒಎಎ)ಯ ಜಾಗತಿಕ ಅಂಕಿಅಂಶಗಳು ಹೇಳಿವೆ.
ಜೂನ್ ತಿಂಗಳ ಜಾಗತಿಕ ಭೂ ಮತ್ತು ಸಾಗರ ಮೇಲ್ಮೈಗಳ ಸರಾಸರಿ ಉಷ್ಣಾಂಶವು 20ನೆ ಶತಮಾನದ ಸರಾಸರಿ ಉಷ್ಣತೆ 15.5 ಡಿಗ್ರಿಗಿಂತ 0.82 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಿದೆ.
Next Story





