ಗೂರ್ಖಾಲ್ಯಾಂಡ್ ಹಿಂಸಾಚಾರ: ಸಮುದಾಯ ಭವನ, ಟಿಎಂಸಿ ಕಚೇರಿ, ವಾಹನಗಳಿಗೆ ಬೆಂಕಿ

ಡಾರ್ಜಿಲಿಂಗ್, ಜು. 19: ಗೂರ್ಖಾಲ್ಯಾಂಡ್ ಹೋರಾಟಕ್ಕೆ ತುತ್ತಾಗಿರುವ ಡಾರ್ಜಿಲಿಂಗ್‌ನಲ್ಲಿ ಬುಧವಾರ ಹೋರಾಟಗಾರರು ಶತಮಾನದಷ್ಟು ಹಳೆಯ ಸಮುದಾಯ ಭವನ, ಟಿಎಂಸಿ ಕಚೇರಿ ಹಾಗೂ ಪೊಲೀಸ್ ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ.
ಕುರ್ಸಿಯೋಂಗ್ ಉಪ ವಲಯದಲ್ಲಿರುವ 100 ವರ್ಷ ಹಲೆಯ ರಾಜರಾಜೇಶ್ವರಿ ಸಭಾಭವನಕ್ಕೆ ಜಿಜೆಎಂ ಕಾರ್ಯಕರ್ತರು ನಿನ್ನೆ ರಾತ್ರಿ ಬೆಂಕಿ ಹಚ್ಚಿದ್ದಾರೆ. ಬುಧವಾರ ಮತ್ತೆ ಹಿಂಸಾಚಾರ ಆರಂಭವಾಗಿದ್ದು, ಡಾರ್ಜಿಲಿಂಗ್‌ನಲ್ಲಿರುವ ತೃಣಮೂಲ ಕಾಂಗ್ರೆಸ್ ಕಚೇರಿಗೆ ಬೆಂಕಿ ಹಚ್ಚಿದರು. ಚೌಕ್‌ಬಝಾರ್‌ಲ್ಲಿರುವ ಪೊಲೀಸ್ ವಾಹನದ ಮೇಲೆ ಪೆಟ್ರೋಲ್ ಬಾಂಬ್ ಎಸೆದರು. ಟಿಎಂಸಿ ಕೌನ್ಸಿಲರ್ ಮರಿಕ್‌ಗೆ ಸೇರಿದ ಗ್ಯಾರೇಜ್‌ಗೆ ಕೂಡ ಹೋರಾಟಗಾರರು ಬೆಂಕಿ ಹಚ್ಚಿದ್ದಾರೆ.
ಈ ಘಟನೆಗಳಲ್ಲಿ ಯಾರೊಬ್ಬರಿಗೂ ಗಾಯಗಳಾಗಿಲ್ಲ. ದುಷ್ಕರ್ಮಿಗಳನ್ನು ಪತ್ತೆಹಚ್ಚಲು ನಾವು ಪ್ರಯತ್ನಿಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.
Next Story





