ಸಂಗಾತಿ ಕ್ರಿಯೇಶನ್ಸ್‌ನ ಜಾವಯ್ ನಂ.1ಗೆ ಮುಹೂರ್ತ

ಮಂಗಳೂರು, ಜು.19: ಸಂಗಾತಿ ಕ್ರಿಯೇಶನ್ಸ್ ವತಿಯಿಂದ ಜಾವಯ್ ನಂ.1(ನಂಬರ್ ಒನ್ ಅಳಿಯ) ಕೊಂಕಣಿ ಚಲನ ಚಿತ್ರಕ್ಕೆ ಚಲನ ಚಿತ್ರ ನಿರ್ದೇಶಕ ಲಾರೆನ್ಸ್ ಡಿ ಸೋಜ ನಗರದಲ್ಲಿಂದು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಚಲನ ಚಿತ್ರದ ನಿರ್ದೇಶಕ ಹ್ಯಾರಿ ಫೆರ್ನಾಂಡೀಸ್, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ರಾಯ್ ಕ್ಯಾಸ್ಟಲಿನೋ, ಮಾಂಡ್ ಸೊಭಾಣ್ ಸಂಸ್ಥೆಯ ಗುರಿಕಾರ್ ಎರಿಕ್ ಒಝಾರಿಯೋ, ದಾಯ್ಜಿ ವರ್ಲ್ಡ್‌ನ ಮುಖ್ಯಸ್ಥ ವಾಲ್ಟರ್ ನಂದಳಿಕೆ , ಧರ್ಮ ಗುರುಗಳಾದ ವಂ.ವೆಲೇರಿಯನ್ ಡಿ ಸೋಜ, ಆಂಡ್ರೋ ಡಿ ಸೋಜ, ಕಲಾವಿದರಾದ ಎಲ್ಟಿನ್ ಮಸ್ಕರೇನಸ್, ದೀಪಕ್ ಪಾಲಕ್ಕಾಡ್ ಮೊದಲಾದವರು ಉಪಸ್ಥಿತರಿದ್ದರು.
Next Story





