ಇ-ಟಾಯ್ಲೆಟ್‌ಗಳ ಸಂಖ್ಯೆ ಹೆಚ್ಚಲಿ
ಮಾನ್ಯರೆ,
ಮಂಗಳೂರಿನಲ್ಲಿ ಒಟ್ಟು ಮೂರು ಕಡೆ 5 ಇ-ಟಾಯ್ಲೆಟ್‌ಗಳು ಕಾರ್ಯಾರಂಭಗೊಂಡಿವೆ. ಈ ಇ-ಟಾಯ್ಲೆಟ್‌ಗಳಲ್ಲಿ ವಿಶೇಷ ಸೌಲಭ್ಯಗಳಿವೆ. ಈಗ ಎಲ್ಲೆಡೆ ಇರುವ ಶೌಚಾಲಯಗಳಿಗಿಂತ ಈ ಇ-ಟಾಯ್ಲೆಟ್‌ಗಳು ಚೆನ್ನಾಗಿವೆ ಎಂದು ಸಾರ್ವಜನಿಕರಿಂದ ಪ್ರತಿಕ್ರಿಯೆ ಬರುತ್ತಿದೆ. ಸ್ಮಾರ್ಟ್ ಸಿಟಿಯತ್ತ ದಾಪುಗಾಲಿಡುವ ಮಂಗಳೂರಿಗೆ ಇಂತಹ ಇ-ಟಾಯ್ಲೆಟ್‌ಗಳು ಅತ್ಯಗತ್ಯವಾಗಿದೆ.
ಆದರೆ ಈಗ ಆರಂಭಿಸಿದ್ದು ಕೇವಲ ನಾಲ್ಕೈದು ಇ-ಟಾಯ್ಲೆಟ್‌ಗಳನ್ನು ಮಾತ್ರ. ಇಡೀ ಮನಪಾ ವ್ಯಾಪ್ತಿಗೆ ಇದು ಏನೇನೂ ಸಾಲದು.
ಮಂಗಳೂರು ನಗರದಲ್ಲಿ ಜನಸಂದಣಿ ಹೆಚ್ಚಿರುವ ಸ್ಥಳಗಳು ಹಲವಾರಿವೆ. ಅಂತಹ ಎಲ್ಲ ಜಾಗಗಳಲ್ಲಿ ಇಂತಹ ಇ-ಟಾಯ್ಲೆಟ್‌ಗಳು ಕಾರ್ಯಾಚರಿಸಬೇಕಾಗಿದೆ. ನಗರದಲ್ಲಿ ಕನಿಷ್ಠ 50 ಇ-ಟಾಯ್ಲೆಟ್‌ಗಳ ಆವಶ್ಯಕತೆಯಿದೆ.
ಅಲ್ಲದೆ ಇಂತಹ ಇ-ಟಾಯ್ಲೆಟ್‌ಗಳ ನಿರ್ವಹಣೆಯನ್ನು ಒಂದು ವರ್ಷ ಕಾಲ ಶೌಚಾಲಯ ನಿರ್ಮಾಣ ಸಂಸ್ಥೆಯೇ ವಹಿಸಿಕೊಂಡಿದ್ದು, ನಂತರ ಮನಪಾವೇ ಇದರ ಉಸ್ತುವಾರಿ ನೋಡಿಕೊಳ್ಳಬೇಕಾಗಿದೆ. ಈ ಇ-ಟಾಯ್ಲೆಟ್‌ಗಳು ಮುಂದೆಯೂ ಸಮರ್ಪಕವಾಗಿ ನಿರ್ವಹಣೆಯಾಗಲು ಮನಪಾ ಈಗಲೇ ಸಿದ್ಧವಾಗಬೇಕಾಗಿದೆ.
-ಜೆ.ಎಫ್.ಡಿ’ಸೋಜಾ, ಅತ್ತಾವರ, ಮಂಗಳೂರು





