ಪಂಜಾಬ್ ಸಿಎಂ-ಡಾ.ಆರತಿ ಕೃಷ್ಣ ಭೇಟಿ

ಬೆಂಗಳೂರು, ಜು.20: ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್‌ರನ್ನು ಗುರುವಾರ ಭೇಟಿ ಮಾಡಿದ ರಾಜ್ಯದ ಅನಿವಾಸಿ ಭಾರತೀಯ ಸಮಿತಿಯ ಉಪಾಧ್ಯಕ್ಷೆ ಡಾ.ಆರತಿ ಕೃಷ್ಣ, ಎನ್‌ಆರ್‌ಐ ಪೊಲೀಸ್ ಸೆಲ್ ಸೇವೆ ಕಲ್ಪಿಸುವುದು ಸೇರಿದಂತೆ ಹಲವಾರು ವಿಷಯಗಳ ಚರ್ಚೆ ನಡೆಸಿದರು.
ಪಂಜಾಬ್ ರಾಜ್ಯದಲ್ಲಿನ ಅನಿವಾಸಿ ಭಾರತೀಯರಿಗೆ ಸಂಬಂಧಿಸಿದ ಮದುವೆ ಮತ್ತು ವಿಚ್ಛೇದನ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿದ್ದು, ಇದಕ್ಕೆ ಪರಿಹಾರ ಕಂಡುಕೊಳ್ಳಲು ‘Marriage Regulation Act’ ಕಾಯ್ದೆಯನ್ನು ಜಾರಿಗೆ ತರಲಾಗಿದೆ. ಪಂಜಾಬ್ ರಾಜ್ಯದಲ್ಲಿನ ಅನಿವಾಸಿ ಭಾರತೀಯರಿಗೆ ಸಂಬಂಧಿಸಿದ ಆಸ್ತಿ ಪ್ರಕರಣಗಳಿಗೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ‘Property Protection Policy’ ಎಂಬ ನೀತಿಯನ್ನು ಜಾರಿಗೆ ತರಲಾಗಿದೆ. ಈ ಎಲ್ಲ ಪ್ರಕರಣಗಳನ್ನು ತ್ವರಿತವಾಗಿ ಪರಿಹಾರ ಮಾಡಲು ಮುಖ್ಯ ನ್ಯಾಯಾಧೀಶರನ್ನು ನೇಮಿಸಲಾಗಿದೆ. ಪ್ರಕರಣಗಳು ಕನಿಷ್ಠ 500ಕ್ಕಿಂತ ಹೆಚ್ಚಿದ್ದರೆ ಅದು ಮುಖ್ಯ ನ್ಯಾಯಾಧೀಶರಿಗೆ ವ್ಯಾಪ್ತಿಗೆ ಬರುತ್ತದೆ. ಈ ಹಿನ್ನೆಲೆಯಲ್ಲಿ ಭಾರತೀಯ ಸೇನೆ ಪ್ರಕರಣಗಳನ್ನು ಇದರೊಂದಿಗೆ ಸೇರಿಸಿ ತ್ವರಿತವಾಗಿ ಪರಿಹಾರ ಮಾಡಲು ಪಂಜಾಬ್‌ನಲ್ಲಿ ಕ್ರಮ ಕೈಗೊಳ್ಳಲಾಗಿದೆ. ಅಲ್ಲದೆ, ಅನಿವಾಸಿ ಭಾರತೀಯರಿಗೆ ಸಂಬಂಧಿಸಿದ ಇತರೆ ಪ್ರಕರಣಗಳಿಗೆ ಪರಿಹಾರ ನೀಡಲು ‘ಎನ್‌ಆರ್‌ಐ ಪೊಲೀಸ್ ಸೆಲ್’ ಸೇವೆಯನ್ನು ಕಲ್ಪಿಸಲಾಗಿದೆ.
ನಮ್ಮ ರಾಜ್ಯದಲ್ಲೂ ಈ ನೂತನ ನಿಯಮಗಳನ್ನು ಅಳವಡಿಸುವ ಸಂಬಂಧ ಆರತಿ ಕೃಷ್ಣ, ಪಂಜಾಬ್ ಮುಖ್ಯಮಂತ್ರಿಯೊಂದಿಗೆ ಸಮಗ್ರವಾಗಿ ಚರ್ಚೆ ನಡೆಸಿದರು.





