ಎಲ್ಲರಂತೆ ಸಾಲಿನಲ್ಲಿ ನಿಂತ ಟಿಟಿವಿ ದಿನಕರನ್
.jpg)
ಬೆಂಗಳೂರು, ಜು.20: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಜೈಲಿನಲ್ಲಿರುವ ತಮಿಳುನಾಡಿನ ಮಾಜಿ ಸಿಎಂ ಜಯಲಲಿತಾ ಆಪ್ತೆ ಶಶಿಕಲಾ ಅವರ ಭೇಟಿಗೆ ಎಐಎಡಿಎಂಕೆ ಪಕ್ಷದ ಉಪ ಪ್ರಧಾನ ಕಾರ್ಯದರ್ಶಿ ಟಿಟಿವಿ ದಿನಕರನ್ ಎಲ್ಲರಂತೆ ಸಾಲಿನಲ್ಲಿ ನಿಂತು ಟೋಕನ್ ಪಡೆದರು.
ಗುರುವಾರ ಮಧ್ಯಾಹ್ನ ಪರಪ್ಪನ ಅಗ್ರಹಾರಕ್ಕೆ ಶಶಿಕಲಾ ಅವರನ್ನು ನೋಡಲು ಬಂದಿದ್ದ ಟಿಟಿವಿ ದಿನಕರನ್ ಹಾಗೂ ಬೆಂಬಲಿಗರು ತಮಗೆ ವಿಶೇಷವಾಗಿ ಪಾಸು ನೀಡುವಂತೆ ಕೋರಿದ್ದಾರೆ. ಆದರೆ, ಪೊಲೀಸರು ಒಪ್ಪದ ಕಾರಣ ಎಲ್ಲರಂತೆ ದಿನಕರ್ ಕೂಡ ಸರತಿ ಸಾಲಿನಲ್ಲಿ ಬಂದು ಟೋಕನ್ ಪಡೆದರು ಎಂದು ಮೂಲಗಳು ತಿಳಿಸಿವೆ.
ವಾಗ್ವಾದ: ದಿನಕರನ್ ಬೆಂಬಲಿಗರು ಹಾಗೂ ಕೈದಿಗಳನ್ನು ನೋಡಲು ಬಂದಿದ್ದ ಸಂಬಂಧಿಕರ ನಡುವೆ ವಾಗ್ವಾದ ನಡೆದಿದೆ ಎಂದು ತಿಳಿದುಬಂದಿದೆ.
Next Story





