ಹುಟ್ಟುಹಬ್ಬದ ದಿನವೇ ಕಾಂಗ್ರೆಸ್ ತೊರೆದ ವಘೇಲಾ
ಹೊಸದಿಲ್ಲಿ, ಜು.21: ತಾನು ಕಾಂಗ್ರೆಸ್ ಪಕ್ಷವನ್ನು ತೊರೆದಿರುವುದಾಗಿ ಗುಜರಾತ್ ಮಾಜಿ ಮುಖ್ಯಮಂತ್ರಿ ಶಂಕರ್ ಸಿಂಗ್ ವಘೇಲಾ ಅಧಿಕೃತವಾಗಿ ಘೋಷಿಸಿದ್ದಾರೆ.
“ವಿಪಕ್ಷದ ನಾಯಕ ಸ್ಥಾನಕ್ಕೆ ನಾನು ರಾಜೀನಾಮೆ ನೀಡಿದ್ದೇನೆ. ರಾಜ್ಯಸಭೆ ಚುನಾವಣೆಯ ನಂತರ ಕಾಂಗ್ರೆಸ್ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಲಿದ್ದೇನೆ. ಯಾವುದೇ ಪಕ್ಷದಲ್ಲೂ ನಾನು ಸದಸ್ಯನಲ್ಲ. ನಾನಿನ್ನು ಸ್ವತಂತ್ರ ಹಕ್ಕಿ” ಎಂದವರು ಹೇಳಿದ್ದಾರೆ,
ಶುಕ್ರವಾರ ತಮ್ಮ 77ನೆ ಹುಟ್ಟುಹಬ್ಬದ ಆಚರಣೆ ಕಾರ್ಯಕ್ರಮದಲ್ಲಿ ಅವರು ಕಾಂಗ್ರೆಸ್ ತೊರೆದಿರುವುದಾಗಿ ಘೋಷಿಸಿದರು.
Next Story