ಹನೂರು: ವಿದ್ಯುತ್ ಕಂಬಕ್ಕೆ ಅಪರಿಚಿತ ವಾಹನ ಢಿಕ್ಕಿ

ಹನೂರು, ಜು. 21: ಪಟ್ಟಣದ ಬಂಡಳ್ಳಿ ರಸ್ತೆಯ ಸಮೀಪದಲ್ಲಿದ್ದ ವಿದ್ಯುತ್ ಕಂಬವೊಂದಕ್ಕೆ ಅಪರಿಚಿತ ವಾಹನ ಢಿಕ್ಕಿ ಹೊಡೆದ ಪರಿಣಾಮ ವಿದ್ಯುತ್ ಕಂಬಗಳು ತುಂಡಾಗಿ ಉರುಳಿ ಬಿದ್ದ ಘಟನೆ ನಡೆದಿದೆ.
ಹನೂರು ಪಟ್ಟಣದ ಜನರ ವಹಿವಾಟು ಹಾಗೂ ಶಾಲೆ ಕಾಲೇಜಿನ ವಿದ್ಯಾರ್ಥಿಗಳು ಹೆಚ್ಚಾಗಿ ಸಂಚರಿಸುವ ಮುಖ್ಯ ರಸ್ತೆಯಲ್ಲಿ ಮುಂಜಾನೆಯ ಸಮಯ ವಾಹನವೊಂದು ಢಿಕ್ಕಿ ಹೂಡೆದಿದೆ. ಕಂಬಗಳು ನೆಲಕ್ಕೆ ಉರುದ ಪರಿಣಾಮ ವಾಹನ ಹಾಗೂ ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗಿದ್ದು, ಈ ಬಗ್ಗೆ ಚೆಸ್ಕಾಂ ಅಧಿಕಾರಿಗಳಿಗೆ ಮಾಹಿತಿ ನೀಡಿ, ತೆರವು ಕಾರ್ಯ ನಡೆಸಿ ನಂತರ ಸಂಚಾರಕ್ಕೆ ಅನುಕೂಲ ಮಾಡಿದರು.
Next Story





