ತರಗತಿ ಪ್ರಾರಂಭದ ಸಮಯ ಬದಲಾವಣೆ ವಿರೋಧಿಸಿ ವಿದ್ಯಾರ್ಥಿನಿಯರ ಪ್ರತಿಭಟನೆ

ಮಂಡ್ಯ, ಜು.21: ತರಗತಿ ಸಮಯ ಬದಲಾವಣೆ ಕ್ರಮ ವಿರೋಧಿಸಿ ನಗರದ ಮಹಿಳಾ ಸರಕಾರಿ ಕಾಲೇಜಿನ ವಿದ್ಯಾರ್ಥಿನಿಯರು ಶುಕ್ರವಾರ ಪ್ರತಿಭಟನೆ ನಡೆಸಿದರು.
ತರಗತಿಗಳನ್ನು ಬಹಿಷ್ಕರಿಸಿ ಮೆರವಣಿಗೆಯಲ್ಲಿ ಜಿಲ್ಲಾಧಿಕಾರಿಗೆ ತೆರಳಿ ಮನವಿ ಸಲ್ಲಿಸಿದ ವಿದ್ಯಾರ್ಥಿನಿಯರು, ಬೆಳಗ್ಗೆ 8 ಗಂಟೆಗೆ ತರಗತಿ ಪ್ರಾರಂಭಿಸುವುದು ಅವೈಜ್ಞಾನಿಕವಾಗಿದೆ ಎಂದು ಕಿಡಿಕಾರಿದರು.
ಗ್ರಾಮಾಂತರ ಪ್ರದೇಶಗಳಿಂದ ಬೆಳಗ್ಗೆ 8 ಗಂಟೆಗೆ ತರಗತಿಗೆ ಬರುವುದು ಕಷ್ಟ. ಇದರಿಂದ ತೊಂದರೆಯಾಗುತ್ತದೆ. ಯಾವುದೇ ಚರ್ಚೆ ಮಾಡದೆ ಏಕಾಏಕಿ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದವರು ಕಿಡಿಕಾರಿದರು.
ಯಾವುದೇ ಚರ್ಚೆ ನಡೆಸದೆ ಏಕಾಏಕಿ ತರಗತಿ ಅವಧಿಯನ್ನು ಬದಲಾವಣೆ ಮಾಡಿರುವುದು ಸರಿಯಲ್ಲವೆಂದ ಅವರು, ಕೂಡಲೇ ಮೊದಲಿನಂತೆ ಬೆಳಗ್ಗೆ 9 ಗಂಟೆಗೆ ತರಗತಿ ಪ್ರಾರಂಭಿಸಬೇಕು ಎಂದು ಒತ್ತಾಯಿಸಿದರು.
Next Story





