ಕ್ರಿಕೆಟಿಗ ಪರ್ವಿಂದರ್ ಅವಾನಾ ಮೇಲೆ ದಾಳಿ ನಡೆಸಿದ ಐವರ ತಂಡ

ಹೊಸದಿಲ್ಲಿ, ಜು.21: ಕ್ರಿಕೆಟಿಗ, ದಿಲ್ಲಿಯ ವೇಗಿ ಪರ್ವೀಂದರ್ ಅವರ ಮೇಲೆ 5 ಜನರ ತಂಡವೊಂದು ಹಲ್ಲೆ ನಡೆಸಿರುವ ಘಟನೆ ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ನಡೆದಿದೆ.
ಘಟನೆಗೆ ಸಂಬಂಧಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆದರೆ ಹಲ್ಲೆ ನಡೆಸಲು ಕಾರಣ ಏನೆಂದು ತಿಳಿದುಬಂದಿಲ್ಲ ಎನ್ನಲಾಗಿದೆ.
2014ರಲ್ಲೂ ಅವಾನಾ ಮೇಲೆ ಹಲ್ಲೆ ನಡೆದಿತ್ತು. ಪಾರ್ಕಿಂಗ್ ವಿಚಾರದಲ್ಲಿ ನಡೆದ ವಾಗ್ವಾದದಲ್ಲಿ ಅವಾನಾ ಮೇಲೆ ಪೊಲೀಸ್ ಸಿಬ್ಬಂದಿಯೊಬ್ಬ ಹಲ್ಲೆ ನಡೆಸಿದ್ದ. ಘಟನೆಗೆ ಸಂಬಂಧಿಸಿ ಪೊಲೀಸ್ ಸಿಬ್ಬಂದಿಯನ್ನು ಅಮಾನತು ಮಾಡಲಾಗಿತ್ತು.
Next Story





