ಗ್ರೀಸ್ ದ್ವೀಪದಲ್ಲಿ ಭೂಕಂಪ: 2 ಸಾವು

ತಿಯೋಲೊಗೊಸ್ (ಗ್ರೀಸ್), ಜು. 21: ಗ್ರೀಸ್‌ನ ಕಾಸ್ ದ್ವೀಪದಲ್ಲಿ ಸಂಭವಿಸಿದ ಭೂಕಂಪದಲ್ಲಿ ಇಬ್ಬರು ಮೃತಪಟ್ಟಿದ್ದಾರೆ ಹಾಗೂ 100ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
ರಿಕ್ಟರ್ ಮಾಪಕದಲ್ಲಿ 6.7ರ ತೀವ್ರತೆ ಹೊಂದಿದ್ದ ಭೂಕಂಪದ ಕೇಂದ್ರ ಬಿಂದು ಟರ್ಕಿಯ ಪ್ರಮುಖ ರಿಸಾರ್ಟ್ ಪಟ್ಟಣ ಬೋಡ್ರಮ್‌ನಿಂದ ದಕ್ಷಿಣಕ್ಕೆ ಸುಮಾರು 10.3 ಕಿ.ಮೀ. ಹಾಗೂ ಗ್ರೀಸ್‌ನ ಕಾಸ್ ದ್ವೀಪದಿಂದ ಪೂರ್ವಕ್ಕೆ 16.2 ಕಿ.ಮೀ. ದೂರದಲ್ಲಿ ಇತ್ತು. ಇವೆರಡೂ ಸ್ಥಳಗಳು ಪ್ರವಾಸಿಗರ ನೆಚ್ಚಿನ ತಾಣಗಳಾಗಿವೆ.
ಕಟ್ಟಡದ ಮೇಲ್ಛಾವಣಿ ಕುಸಿದಾಗ ಸಾವು ಸಂಭವಿಸಿದೆ.
Next Story





