ಅತ್ಯಾಚಾರ ಎಸಗಲು ಮುಂದಾದ ಪತಿಯ ವೃಷಣಗಳನ್ನೇ ಕತ್ತರಿಸಿದ ಮಹಿಳೆ

ವೆಲ್ಲೂರು, ಜು.21: ನಿರಂತರ ದೌರ್ಜನ್ಯದಿಂದ ಬೇಸತ್ತ ಪತ್ನಿಯೊಬ್ಬಳು ತನ್ನ ಪತಿಯ ವೃಷಣಗಳನ್ನೇ ಕತ್ತರಿಸಿದ ಘಟನೆ ವೆಲ್ಲೂರ್ ನಲ್ಲಿ ನಡೆದಿದೆ.
29 ವರ್ಷದ ಮಹಿಳೆಯ ಪತಿ ದಿನನಿತ್ಯ ಮದ್ಯಪಾನ ಮಾಡಿ ಕಿರುಕುಳ ನೀಡುತ್ತಿದ್ದು, ಪತ್ನಿಯ ಮೇಲೆ ಹಲ್ಲೆ ನಡೆಸುತ್ತಿದ್ದ ಎನ್ನಲಾಗಿದೆ. ಕೆಲವೊಮ್ಮೆ ಆಕೆಯನ್ನು ಮನೆಯಿಂದ ಹೊರದಬ್ಬುತ್ತಿದ್ದುದಲ್ಲದೆ ಬೇರೊಬ್ಬ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಎಂದು ಆರೋಪಿಸಲಾಗಿದೆ.
ಗುರುವಾರ ಮಧ್ಯರಾತ್ರಿ ಮದ್ಯಪಾನ ಸೇವಿಸಿದ್ದ ಆತ ಪತ್ನಿಯನ್ನೇ ಅತ್ಯಾಚಾರಗೈಯಲು ಯತ್ನಿಸಿದ್ದು, ಇದರಿಂದ ಕೋಪಗೊಂಡ ಮಹಿಳೆ ಚಾಕುವಿನಿಂದ ಆತನ ವೃಷಣಗಳನ್ನೇ ಕತ್ತರಿಸಿ ಹಾಕಿದ್ದಾಳೆ.
ಈ ಸಂದರ್ಭ ಆತನ ಬೊಬ್ಬೆ ಕೇಳಿದ ನೆರೆಹೊರೆಯವರು ಮನೆಗೆ ಧಾವಿಸಿದ್ದು, ಸ್ಥಳೀಯ ಸರಕಾರಿ ಆಸ್ಪತ್ರೆಯೊಂದಕ್ಕೆ ದಾಖಲಿಸಿದ್ದಾರೆ. ಮಹಿಳೆಯನ್ನು ಗುಡಿಯಾತಂ ಪಟ್ಟಣ ಪೊಲೀಸರು ಬಂಧಿಸಿದ್ದಾರೆ
Next Story





