ಹಜ್ ತರಬೇತಿ ಶಿಬಿರ
ಮಂಗಳೂರು, ಜು. 21: ಕರ್ನಾಟಕ ಸಲಫಿ ಅಸೋಸಿಯೇಶನ್ ಮಂಗಳೂರು ಇದರ ವತಿಯಿಂದ ಜು.23ರಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 12:30ರ ತನಕ ಈ ವರ್ಷದ ಪವಿತ್ರ ಹಜ್ಜ್ ಯಾತ್ರೆಗಾಗಿ ಹೊರಡುವ ಮಂಗಳೂರು ಆಸುಪಾಸಿನವರಿಗಾಗಿ ಹಜ್ಜ್ ತರಬೇತಿ ಶಿಬಿರವೊಂದನ್ನು ಕಂಕನಾಡಿ ಮಸೀದಿ ಹಿಂಭಾಗದಲ್ಲಿರುವ ಜಮೀಯತುಲ್ ಫಲಾಹ್ ಹಾಲ್‌ನಲ್ಲಿ ಏರ್ಪಡಿಸಲಾಗಿದೆ.
ಶಿಬಿರವು ಕನ್ನಡ/ಬ್ಯಾರಿ/ಉರ್ದು ಭಾಷೆಗಳಲ್ಲಿ ನಡೆಯಲಿದೆ. ಆಸಕ್ತರು 8310375990 ಮೊಬೈಲ್ ನಂಬರ್‌ಗೆ ಸಂಪರ್ಕಿಸಲು ಪ್ರಕಟನೆ ಕೋರಿದೆ.
Next Story





