ವಾಮಾಚಾರದ ಹೆಸರಿನಲ್ಲಿ ಸೂಜಿ ಚುಚ್ಚಿ ಮಗುವಿನ ಕೊಲೆ

ಕೋಲ್ಕತಾ, ಜು. 21: ವಾಮಾಚಾರ ನಡೆಸುತ್ತಿದ್ದ ವ್ಯಕ್ತಿಯೋರ್ವ ಸೂಚಿ ಚುಚ್ಚಿದ ಪರಿಣಾಮ ಮೂರು ವರ್ಷದ ಬಾಲಕಿ ಅಸ್ವಸ್ಥಳಾಗಿ ಇಲ್ಲಿನ ಸರಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಇಂದು ನಡೆದಿದೆ.
ಪುರುಲಿಯಾ ಮೂಲದ ಬಾಲಕಿಯನ್ನು ಇಲ್ಲಿ ಸರಕಾರಿ ಎಸ್‌ಎಸ್‌ಕೆಎಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು ಬಾಲಕಿಯ ದೇಹದಿಂದ 7 ಸೂಜಿಗಳನ್ನು ತೆಗೆದಿದ್ದಾರೆ. ಬಾಲಕಿ ಶುಕ್ರವಾರ 2.40ರ ಹೊತ್ತಿಗೆ ಮೃತಪಟ್ಟಳು ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ವ್ಯಕ್ತಿಯಿಂದ ಲೈಂಗಿಕ ಕಿರುಕುಳ ಹಾಗೂ ದೌರ್ಜನ್ಯ ಎಸಗಿದ್ದ ಎಂದು ಬಾಲಕಿ ಚಿಕಿತ್ಸೆಯ ಸಂದರ್ಭ ಹೇಳಿದ್ದಾಳೆ.
ಮಾಜಿ ಹೋಮಗಾರ್ಡ್ ಆಗಿದ್ದ ವ್ಯಕ್ತಿಯ ವಿರುದ್ಧ ಪೊಕ್ಸೋ ಕಾಯ್ದೆ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story





