ಎನ್‌ಡಿಎ: ಆಳ್ವಾಸ್‌ನ 27 ವಿದ್ಯಾರ್ಥಿಗಳು ಎಸ್‌ಎಸ್‌ಬಿಗೆ ಅರ್ಹತೆ

ಮೂಡುಬಿದಿರೆ: ಭಾರತೀಯ ಸೇನೆಯ ಉನ್ನತ ಹುದ್ದೆಗಳಿಗಾಗಿ ಪ್ರಾಥಮಿಕ ಹಂತದಲ್ಲಿ ನಡೆಯುವ ನ್ಯಾಶನಲ್ ಡಿಫೆನ್ಸ್ ಅಕಾಡೆಮಿ(ಎನ್‌ಡಿಎ) ಪರೀಕ್ಷೆಯಲ್ಲಿ ಆಳ್ವಾಸ್‌ನ 27 ಮಂದಿ ವಿದ್ಯಾರ್ಥಿಗಳುಆಯ್ಕೆಯಾಗಿದ್ದಾರೆ. ಈ ವಿದ್ಯಾರ್ಥಿಗಳು ಮುಂದೆ ನಡೆಯುವ ಸೆರ್ವಿಸ್ ಸೆಲೆಕ್ಷನ್ ಬೋರ್ಡ್(ಎಸ್‌ಎಸ್‌ಬಿ)ಗೆ ಅರ್ಹತೆಯನ್ನು ಪಡೆದಿದ್ದಾರೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಏ.23ರಂದು ನಡೆದ ಪರೀಕ್ಷೆಯಲ್ಲಿ ಆಳ್ವಾಸ್ ಪದವಿಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಾದ ಶರತ್ ಬಾಬು ಎನ್, ಸಂಗ್ಮೇಶ್ ಭುರೆ, ಪ್ರಜ್ವಲ್ ಕುಮಾರ್ ಎಂ.ಜೆ, ಕಿರಣ್ ಕುಮಾರ್ ಆರ್, ಕೃಷ್ಣ ಕುಮಾರ್ ಕೆ., ಚಂದ್ರಶೇಖರ್ ಗೊಲಗುಂಡ್, ಪ್ರಭುರಾಜ್ ಗೌಡ ಮಲ್ಲಪುರ್, ಮೃತ್ಯುಂಜಯ ರಾಜೇಂದ್ರ ಕಲ್ಯಾಣಿ, ನಿತೇಶ್ ಕೆ.ಬಡಿಗೇರ್, ಸಚಿತ್ ಎಸ್ ಅಂಬ್ಳೇಕರ್, ಹರಿ ಕುಮಾರ್ ಎನ್.ಸಿ, ಆಕಾಶ ಸತ್ತಿ, ಜಿ.ಎಲ್ ರಕ್ಷಿತ್, ಪ್ರಣವ್ ಕುಮಾರ್, ಶ್ರೇಯಸ್ ವಿಜಯ್ ಕಟಗಿ, ನಾಗರಾಜ್, ವೈಭವ್ ಅಥಣಿ, ಅಭಿಷೇಕ್ ಎಂ.ಯು, ರಾಜೀವ್ ಜಿ.ಎಂ, ಸಚಿನ್ ರಡ್ಡೆರ್, ವಿನಾಯಕ್ ಕಮರೆಡ್ಡಿ, ವಿ.ಎಸ್ ಪೂವಣ್ಣ, ಮಹಾಂತೇಶ್ ಮಗಿ, ದರ್ಶನ್ ಸಿ.ರೆಡ್ಡಿ, ವಿನಯ್ ಎನ್., ಹೇಮಂತ್ ಕೆ.ಎಸ್, ಶಿವಕುಮಾರ್ ವಿ.ಕಾಮನ್ನವರ್, ಎಸ್‌ಎಸ್‌ಬಿಗೆ ಅರ್ಹತೆಯನ್ನು ಪಡೆಕೊಂಡವರು. ಆಳ್ವಾಸ್ ಸಂಸ್ಥೆಯಲ್ಲಿ ಎನ್‌ಡಿಎ ತರಬೇತಿಯು ನುರಿತ ತರಬೇತುದಾರರಿಂದ ವ್ಯವಸ್ಥಿತವಾಗಿ ಸಿಗುತ್ತಿರುವುದರಿಂದ ಸಾಧನೆ ಮಾಡಲು ಸಾಧ್ಯವಾಗಿದೆ ಎಂದು ಸಾಧನೆ ಮಾಡಿದ ವಿದ್ಯಾರ್ಥಿಗಳು, ತರಬೇತಿ ನೀಡಿದ ತರಬೇತುದಾರರನ್ನು ಡಾ.ಎಂ ಮೋಹನ ಆಳ್ವ ಅಭಿನಂದಿಸಿದ್ದಾರೆ. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಡಳಿತ ಮಂಡಳಿ ಸದಸ್ಯ ದೇವಿ ಪ್ರಸಾದ್ ಶೆಟ್ಟಿ, ಆಳ್ವಾಸ್ ಪಿಯು ಕಾಲೇಜಿನ ಪ್ರಾಂಶುಪಾಲ ಪ್ರೊ.ರಮೇಶ್ ಶೆಟ್ಟಿ, ಆಳ್ವಾಸ್ ಪಿಆರ್‌ಒ ಡಾ.ಪದ್ಮನಾಭ ಶೆಣೈ, ಎನ್‌ಡಿಎ ತರಬೇತಿ ಸಂಯೋಜಕರಾದ ಗಣನಾಥ್ ಶೆಟ್ಟಿ, ಅಶ್ವತ್ಥ್ ಸುದ್ದಿಗೋಷ್ಠಿಯಲ್ಲಿದ್ದರು





