Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಕಾರವಾರ ಕಡಲತೀರದಲ್ಲಿ ಹೆಬ್ರಿಡ್ ತೆಂಗಿನ...

ಕಾರವಾರ ಕಡಲತೀರದಲ್ಲಿ ಹೆಬ್ರಿಡ್ ತೆಂಗಿನ ತಳಿ

ಶ್ರೀನಿವಾಸ್ ಬಾಡ್ಕರ್ಶ್ರೀನಿವಾಸ್ ಬಾಡ್ಕರ್21 July 2017 11:52 PM IST
share
ಕಾರವಾರ ಕಡಲತೀರದಲ್ಲಿ ಹೆಬ್ರಿಡ್ ತೆಂಗಿನ ತಳಿ

ಕಾರವಾರ, ಜು.21: ಪ್ರವಾಸಿಗರನ್ನು ಕೈಬೀಸಿ ಕರೆಯುವ ನಗರದ ಕಡಲ ತೀರದ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಲು ಖಾಲಿ ಇರುವ ಪ್ರದೇಶದಲ್ಲಿ ಹೈಬ್ರಿಡ್ ತಳಿಯ ತೆಂಗಿನ ಗಿಡಗಳನ್ನು ನೆಡಲು ಯೋಜನೆ ರೂಪಿಸಲಾಗಿದೆ. ರವೀಂದ್ರನಾಥ್ ಟಾಗೋರ್ ಕಡಲತೀರಗಳ ಅಭಿವೃದ್ಧಿ ಸಮಿತಿಯು ಆದಾಯ ಹೆಚ್ಚಿಸಲು ಹಾಗೂ ಪ್ರವಾಸಿಗರನ್ನು ಇನ್ನಷ್ಟು ಆಕರ್ಷಿಸಲು ಕಾರ್ಯ ಪ್ರವೃತ್ತವಾಗಿದೆ.

ಪ್ರತಿವರ್ಷ ಇಲ್ಲಿ ಆಗಮಿಸುವ ಲಕ್ಷಾಂತರ ಪ್ರವಾಸಿಗರ ಅನುಕೂಲಕ್ಕಾಗಿ ಕಡಲತೀರದಲ್ಲಿ ಕುಡಿಯುವ ನೀರು, ಕುಳಿತು ಕೊಳ್ಳುವ ಆಸನ, ಫುಡ್‌ಕೋರ್ಟ್, ಉದ್ಯಾನವನ, ಮಕ್ಕಳ ಉದ್ಯಾನವನ ಸೇರಿದಂತೆ ಹಲವಾರು ಮೂಲಭೂತ ಸೌಕರ್ಯಗಳನ್ನು ಸಮಿತಿಯು ಕಲ್ಪಿಸಿದೆ. ಜೊತೆಗೆ ಪ್ರಸಕ್ತ ವರ್ಷದ ಪ್ರಾರಂಭದಿಂದ ಆರಂಭಗೊಂಡಿರುವ ಜಲ ಸಾಹಸ ಕ್ರೀಡೆಗಳು, ಪ್ಯಾರಾಸೆಲ್ಲಿಂಗ್, ಪ್ಯಾರಾ ಗ್ಲೈಡಿಂಗ್ ಮುಂತಾದ ಚಟುವಟಿಕೆಗಳು ಪ್ರಮುಖ ಆಕರ್ಷಣೆಗಳ ಕೇಂದ್ರಗಳಾಗಿವೆ. ಈಗ ಇನ್ನಷ್ಟು ಅಭಿವೃದ್ಧಿ ಪಡಿಸಲು ಮುಂದಾಗಿರುವ ಸಮಿತಿಯು ಖಾಲಿ ಇರುವ ಸಮುದ್ರ ತೀರದ ಪ್ರದೇಶದುದ್ದಕ್ಕೂ ಉತ್ತಮ ತಳಿಯ ತೆಂಗಿನ ಗಿಡಗಳನ್ನು ನೆಟ್ಟು ಆ ಮೂಲಕ ಕಡಲತೀರದಲ್ಲಿ ಸೌಂದರ್ಯ ಹೆಚ್ಚಿಸುವುದರ ಜತೆಗೆ ಕಡಲತೀರದಲ್ಲಿ ತೆಂಗಿನಕಾಯಿಗಳ ಮೂಲಕ ಆದಾಯ ಗಿಟ್ಟಿಸಿಕೊಳ್ಳಲು ಯೋಜನೆ ಸಿದ್ದಪಡಿಸಿದೆ.

ಹೈಬ್ರಿಡ್ ತಳಿ: ಕಡಲತೀರದಲ್ಲಿ ಸೌಂದರ್ಯವನ್ನು ಹೆಚ್ಚಿಸಲು ಆಕರ್ಷಣೀಯ ವಾಗಿ ಕಾಣುವಂತಹ ಹೈಬ್ರಿಡ್ ತಳಿಗಳ ತೆಂಗಿನ ಗಿಡಗಳನ್ನು ವಿಶೇಷವಾಗಿ ಮಂಗಳೂರಿನ ನೇತಾನದಲ್ಲಿರುವ ಕೇಂದ್ರ ಸರಕಾರದ ಕ್ರಾಪ್ಸ್ ಸಂಶೋಧನಾ ಸಂಸ್ಥೆಯಿಂದ ತರಿಸಿಕೊಳ್ಳಲಾಗಿದೆ. ಈಗಾಗಲೇ 200 ಮೊಳಕೆಯೊಡೆದ ತೆಂಗಿನ ಗಿಡಗಳನ್ನು ತರಿಸಿಕೊಳ್ಳಲಾಗಿದ್ದು ಇವುಗಳನ್ನು ನೆಟ್ಟ ಬಳಿಕ ಇನ್ನಷ್ಟು ಗಿಡಗಳನ್ನು ತಂದು ಕಡಲತೀರದಲ್ಲಿ ನೆಡಲು ಸಮಿತಿಯು ನಿರ್ಧರಿಸಿದೆ. ಸದ್ಯಕ್ಕೆ ವಿಪರೀತವಾಗಿ ಮಳೆ ಸುರಿಯುತ್ತಿರುವ ಕಾರಣ ಹಿನ್ನಡೆಯಾಗುತ್ತಿದೆ. ಮಳೆ ಮುಗಿಯುತ್ತಿದ್ದಂತೆ ಗಿಡಗಳನ್ನು ನೆಡಲು ಯೋಚಿಸಲಾಗಿದೆ.

 ಕಡಲತೀರದಲ್ಲಿ ಹೆಚ್ಚು ಆಕರ್ಷಣೆ: ಇಲ್ಲಿನ ಕಡಲ ತೀರದಲ್ಲಿ ನೆಡಲು ಉದ್ದೇಶಿಸಲಾಗಿರುವ ಹೈಬ್ರಿಡ್ ತಳಿಯ ಈ ತೆಂಗಿನ ಗಿಡಗಳು ಬೆಳೆದು ದೊಡ್ಡದಾಗಿ ಹೆಚ್ಚು ಆಕರ್ಷಕವಾಗಿ ಕಾಣುತ್ತವೆ. ಇತರ ತೆಂಗಿನ ಮರಗಳಂತೆ ಎತ್ತರಕ್ಕೆ ಬೆಳೆಯದ ಇವುಗಳು ಗರಿಷ್ಠ 10 ಅಡಿಗಳವರೆಗೆ ಬೆಳೆಯುತ್ತವೆ. ತೆಂಗಿನ ಕಾಯಿಗಳು ಕೂಡ ಕಿತ್ತಳೆ ಬಣ್ಣದಲ್ಲಿದ್ದು ಸುಂದರವಾಗಿ ಗೋಚರಿಸುತ್ತವೆ. ಆದ್ದರಿಂದ ಈ ತಳಿಯನ್ನು ಸಮಿತಿಯು ಆಯ್ಕೆ ಮಾಡಿದೆ. ಮಂಗಳೂರಿನ ತೋಟ ಬೆಳೆಗಳ ಸಂಶೋಧನಾ ಸಂಸ್ಥೆಯಿಂದ 36 ಸಾವಿರ ರೂ. ವೆಚ್ಚದಲ್ಲಿ ಖರೀದಿಸಿದೆ ಎಂದು ತೋಟಗಾರಿಕಾ ಇಲಾಖೆಯ ಉಪನಿರ್ದೇಶಕ ಶಶಿಕಾಂತ್ ಕೋಟಿಮಾನಿ ಮಾಹಿತಿ ನೀಡಿದರು.

  ಆದಾಯ ಹೆಚ್ಚಿಸಲು ಯೋಜನೆ: ಕರಾವಳಿ ತೀರದ ಹಲವು ಭಾಗಗಳಲ್ಲಿ ಬೇಸಿಗೆಯ ಸಂದರ್ಭದಲ್ಲಿ ಎಳನೀರಿಗೆ ಹೆಚ್ಚಿನ ಬೇಡಿಕೆ ಇದೆ. ಪ್ರವಾಸಿಗರು ಹಾಗೂ ಈ ಭಾಗದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಖರೀದಿಸುತ್ತಾರೆ. ಅಲ್ಲದೆ ಕಡಲತೀರದಲ್ಲಿ ಕೂಡ ಸಾಕಷ್ಟು ಜಾಗವಿದ್ದು, ಈ ಪ್ರದೇಶದಲ್ಲಿ ಇತರ ಸಸಿ ನೆಡುವ ಬದಲು ಆದಾಯ ತರುವಂತಹ ಗಿಡಗಳನ್ನು ನೆಟ್ಟರೆ ಮುಂದಿನ ದಿನಗಳಲ್ಲಿ ಹೆಚ್ಚು ಸಹಕಾರಿಯಾಗುವುದೆಂದು ನಿರ್ಧರಿಸಿದ ಸಮಿತಿಯು ಈ ಯೋಜನೆ ರೂಪಿಸಿದೆ. ಕುಬ್ಜವಾಗಿ ಬೆಳೆಯುವ ಈ ತಳಿಯು 3-4 ವರ್ಷಗಳಲ್ಲಿಯೇ ಫಲವನ್ನು ನೀಡುವುದಲ್ಲದೆ ಇದರ ಇಳುವರಿ ಕೂಡ ಹೆಚ್ಚಾಗಿದೆ.

ಕಡಲ ತೀರದಲ್ಲಿ ಹೆಚ್ಚಿನ ಸ್ಥಳಾವಕಾಶ ಇರುವುದರಿಂದ ಉತ್ತಮ ತಳಿಯ ತೆಂಗಿನ ಗಿಡಗಳನ್ನು ನೆಡುವುದರ ಮೂಲಕ ರವೀಂದ್ರನಾಥ್ ಟಾಗೋರ್ ಅಭಿವೃದ್ಧಿ ಸಮಿತಿಯ ಆದಾಯ ಹೆಚ್ಚಿಸಲು ಉದ್ದೇಶಿಸಲಾಗಿದೆ. ಕಡಲತೀರದ ನಿರ್ವಹಣೆ, ಅಭಿವೃದ್ಧಿಗೆ ಇದು ಸಹಕಾರಿಯಾಗಲಿದೆ.
 
ಎಚ್ ಪ್ರಸನ್ನ, ಅಪರ ಜಿಲ್ಲಾಧಿಕಾರಿ

share
ಶ್ರೀನಿವಾಸ್ ಬಾಡ್ಕರ್
ಶ್ರೀನಿವಾಸ್ ಬಾಡ್ಕರ್
Next Story
X