ಲಿಯು ಪತ್ನಿಗೆ ಓಡಾಟದ ಸ್ವಾತಂತ್ರ ಕೊಡಿ
ವಿಶ್ವಸಂಸ್ಥೆ ಮಾನವಹಕ್ಕುಗಳ ಮುಖ್ಯಸ್ಥನಿಂದ ಚೀನಾಕ್ಕೆ ಒತ್ತಡ

ವಿಶ್ವಸಂಸ್ಥೆ, ಜು. 21: ಇತ್ತೀಚೆಗೆ ಮೃತಪಟ್ಟ ಪ್ರಜಾಪ್ರಭುತ್ವ ಹೋರಾಟಗಾರ ಹಾಗೂ ನೊಬೆಲ್ ಶಾಂತಿ ಪ್ರಶಸ್ತಿ ವಿಜೇತ ಲಿಯು ಕ್ಸಿಯಾವೊಬೊ ಅವರ ಪತ್ನಿಗೆ ಮುಕ್ತವಾಗಿ ಓಡಾಡಲು ಅವಕಾಶ ನೀಡುವಂತೆ ಹಾಗೂ ಆಕೆ ಬಯಸಿದರೆ ಬೇರೆ ದೇಶಕ್ಕೆ ಹೋಗಲು ಅನುಮತಿ ನೀಡುವಂತೆ ಚೀನಾದ ಮೇಲೆ ಒತ್ತಡ ಹೇರುವುದನ್ನು ಮುಂದುವರಿಸುವುದಾಗಿ ವಿಶ್ವಸಂಸ್ಥೆಯ ಮಾನವಹಕ್ಕುಗಳ ಮುಖ್ಯಸ್ಥ ಝಯೀದ್ ರಅದ್ ಅಲ್ ಹುಸೈನ್ ಹೇಳಿದ್ದಾರೆ.
ತಾನು ಜಿನೇವಕ್ಕೆ ಮರಳಿದಾಗ, ಲಿಯು ಕ್ಸಿಯಾ ಅವರಿಗೆ ಓಡಾಟದ ಸ್ವಾತಂತ್ರವನ್ನು ನೀಡುವಂತೆ ಚೀನಾ ಅಧಿಕಾರಿಗಳ ಮನವೊಲಿಸಲು ಪ್ರಯತ್ನಿಸುತ್ತೇನೆ ಎಂದು ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅಲ್ ಹುಸೈನ್ ತಿಳಿಸಿದರು.
ಸರಕಾರದ ವಿರುದ್ಧ ಬಂಡೇಳಲು ಕರೆ ನೀಡಿದ ಆರೋಪದಲ್ಲಿ 11 ವರ್ಷಗಳ ಜೈಲು ಶಿಕ್ಷೆಗೆ ಒಳಗಾಗಿದ್ದ ಲಿಯು, ಜುಲೈ 13ರಂದು ಲಿವರ್ ಕ್ಯಾನ್ಸರ್‌ನಿಂದಾಗಿ ಮೃತಪಟ್ಟಿದ್ದಾರೆ. ಅವರ ಹೆಂಡತಿ ಲಿಯು ಕ್ಸಿಯಾರನ್ನು ಮೊದಲು ಗೃಹಬಂಧನದಲ್ಲಿಡಲಾಗಿತ್ತು. ಈಗ ಅವರು ಎಲ್ಲಿದ್ದಾರೆಂದು ಯಾರಿಗೂ ಗೊತ್ತಿಲ್ಲ
Next Story





